ಗಂಗಾವತಿ :ಮಹಾವೀರ ಜಯಂತಿ ಅಂಗವಾಗಿ ಇಲ್ಲಿನ ಜೈನ್ ಸಮುದಾಯದವರು ಮೂರು ಸಾವಿರ ಜನರಿಗೆ ಆಹಾರದ ಪೊಟ್ಟಣಗಳನ್ನು ಸಿದ್ಧಪಡಿಸಿ ವಿತರಿಸಿದರು.
ಮಹಾವೀರ ಜಯಂತಿ ಅಂಗವಾಗಿ ಮೂರು ಸಾವಿರ ಜನರಿಗೆ ಆಹಾರ ವಿತರಣೆ.. - ಮಹಾವೀರ ಜಯಂತಿ
ಹಸಿದವರ ಹೊಟ್ಟೆಗಳನ್ನ ತುಂಬಿಸಿ ಜೈನ ಸಮುದಾಯದವರು ಮಹಾವೀರ ಜಯಂತಿಯನ್ನ ತುಂಬಾ ಅರ್ಥಪೂರ್ಣವಾಗಿ ಆಚರಿಸಿದ್ದಾರೆ.
ಮಹಾವೀರ ಜಯಂತಿ ಅಂಗವಾಗಿ ಮೂರು ಸಾವಿರ ಜನರಿಗೆ ಆಹಾರ ವಿತರಣೆ
ಇಲ್ಲಿನ ನಗರೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಸಮುದಾಯದ ಯುವಕರು ಪುಳಿಯೊಗರೆ, ಸಿಹಿಲಾಡು ಬೂಂದಿ ಹಾಗೂ ಉಪ್ಪಿನಕಾಯಿಯನ್ನು ಪ್ಯಾಕ್ ಮಾಡಿ, ನಿರ್ಗತಿಕರು, ಕರ್ತವ್ಯ ನಿರತ ಸೇವಾ ಸಿಬ್ಬಂದಿ, ಪೌರ ಕಾರ್ಮಿಕರು ಸೇರಿದಂತೆ ಅಗತ್ಯತೆಯುಳ್ಳವರಿಗೆ ಪೂರೈಸಿದರು.