ಕುಷ್ಟಗಿ:ಕೊರೊನಾ ವೈರಸ್ ಲಾಕ್ಡೌನ್ಲ್ಲಿ ದೇವದಾಸಿಯರಿಗೆ ಹಾಗೂ ನಿರ್ಗತಿಕರಿಗೆ ಆಹಾರದ ಕೊರತೆ ಭಾದಿಸದಂತೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ 1,000 ದಿನಸಿ ಸಾಮಾಗ್ರಿಗಳ ಕಿಟ್‌ಗಳನ್ನು ತಹಶೀಲ್ದಾರ್ ಕಚೇರಿಗೆ ಹಸ್ತಾಂತರಿಸಿದರು.
ಗುಮಗೇರಾ, ಗಂಗನಾಳ ದೇವದಾಸಿಯರಿಗೆ ದಿನಸಿ ಸಾಮಾಗ್ರಿ ಕಿಟ್ ವಿತರಣೆ.. - Distribution of groceries kit to devadasis
ಕುಷ್ಟಗಿಯ ಗುಮಗೇರಾ ಗ್ರಾ.ಪಂ. ವ್ಯಾಪ್ತಿಯ ಗುಮಗೇರಾ, ಗಂಗನಾಳ ಗ್ರಾಮದಲ್ಲಿ ದೇವದಾಸಿಯರಿಗೆ ಹಾಗೂ ನಿರ್ಗತಿಕರಿಗೆ ಮಾಸ್ಕ್ ಹಾಗೂ ದಿನಸಿ ಸಾಮಾಗ್ರಿ ಕಿಟ್‌ಗಳನ್ನು ವಿತರಿಸಲಾಯಿತು.
ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ
ಈ ಕಿಟ್‌ಗಳನ್ನು ಗ್ರಾಮ ಲೆಕ್ಕಾಧಿಕಾರಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ದೇವದಾಸಿಯರ ಕುಟುಂಬಗಳಿಗೆ ತಲುಪಿಸಲು ಸೂಚಿಸಿದ್ದೇವೆ ಎಂದು ತಹಶೀಲ್ದಾರ್ ಎಂ.ಸಿದ್ದೇಶ ತಿಳಿಸಿದ್ದಾರೆ. ದಿನಸಿ ಸಾಮಾಗ್ರಿಗಳ ಕಿಟ್ ಹಾಗೂ ಮಾಸ್ಕ್ಗಳನ್ನು ಗುಮಗೇರಾ ಗ್ರಾ.ಪಂ. ವ್ಯಾಪ್ತಿಯ ಗುಮಗೇರಾ, ಗಂಗನಾಳ ಗ್ರಾಮದಲ್ಲಿ ವಿತರಿಸಲಾಯಿತು.
ಗ್ರಾಮ ಲೆಕ್ಕಾಧಿಕಾರಿ ಹನಮಂತರಾಯ ವಠಾರ, ಗ್ರಾ.ಪಂ. ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.