ಕೊಪ್ಪಳ: ಹೊರ ರಾಜ್ಯಗಳಿಂದ ಜಿಲ್ಲೆಗೆ ಈವರೆಗೆ ಬಂದ ಒಟ್ಟು ವಲಸೆ ಕಾರ್ಮಿಕರ ಪೈಕಿ 1,356 ಕಾರ್ಮಿಕರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ್ ತಿಳಿಸಿದ್ದಾರೆ.
ಹೊರ ರಾಜ್ಯಗಳಿಂದ ಬಂದ 1,356 ಕಾರ್ಮಿಕರಿಗೆ ಸೋಂಕು ತಪಾಸಣೆ: ಕೊಪ್ಪಳ ಡಿಸಿ - ಕಾರ್ಮಿಕರನ್ನು ಕೊರೊನಾಟೆಸ್ಟ್ ಮಾಡಲಾಗಿದೆ
ಹೊರ ರಾಜ್ಯಗಳಿಂದ ಒಟ್ಟು 1,393 ಜನ ವಲಸೆ ಕಾರ್ಮಿಕರು ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ 1,356 ಕಾರ್ಮಿಕರಿಗೆ ಸೋಂಕು ತಪಾಸಣೆ ಮಾಡಲಾಗಿದೆ. ಈ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದಿರುವ 18 ಹಾಗೂ ತಮಿಳುನಾಡಿನಿಂದ ಬಂದ 19 ಮಂದಿಯ ವರದಿ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
![ಹೊರ ರಾಜ್ಯಗಳಿಂದ ಬಂದ 1,356 ಕಾರ್ಮಿಕರಿಗೆ ಸೋಂಕು ತಪಾಸಣೆ: ಕೊಪ್ಪಳ ಡಿಸಿ Disinfection migrant workers from outer states Koppal DC](https://etvbharatimages.akamaized.net/etvbharat/prod-images/768-512-7409641-474-7409641-1590839627200.jpg)
ಈ ಕುರಿತು ಮಾಹಿತಿ ನೀಡಿದ ಅವರು, ಹೊರ ರಾಜ್ಯಗಳಿಂದ ಒಟ್ಟು 1,393 ಜನ ವಲಸೆ ಕಾರ್ಮಿಕರು ಜಿಲ್ಲೆಗೆ ಬಂದಿದ್ದಾರೆ. ಈ ಪೈಕಿ 1,356 ಕಾರ್ಮಿಕರಿಗೆ ಸೋಂಕು ತಪಾಸಣೆ ಮಾಡಲಾಗಿದೆ. ಈ ಪೈಕಿ ಮೂವರಿಗೆ ಸೋಂಕು ದೃಢಪಟ್ಟಿದೆ. ಮಹಾರಾಷ್ಟ್ರದಿಂದ ಬಂದಿರುವ 18 ಹಾಗೂ ತಮಿಳುನಾಡಿನಿಂದ ಬಂದ 19 ಮಂದಿಯ ವರದಿ ಬಾಕಿ ಇದೆ ಎಂದರು.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,010 ಜನರ ಮಾದರಿ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸಲಾಗಿದ್ದು, 3,835 ಜನರ ವರದಿ ನೆಗಟಿವ್ ಎಂದು ಬಂದಿದೆ. ನಾಲ್ವರ ವರದಿ ಪಾಸಿಟಿವ್ ಎಂದಿದ್ದು ಈ ಪೈಕಿ ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಊಲಿದ ಇಬ್ಬರು ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.