ಕೊಪ್ಪಳ:ಕೇಂದ್ರ ಸರ್ಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಇಂದು ಕರೆ ನೀಡಲಾಗಿರುವ ಭಾರತ್ ಬಂದ್ಗೆ ಬೆಂಬಲಿಸಿ ಕೊಪ್ಪಳದಲ್ಲಿಯೂ ಪ್ರತಿಭಟನಾಕಾರರು ರಸ್ತೆಗಳಿದಿದ್ದಾರೆ. ರೈತ ಸಂಘದ ಕಾರ್ಯಕರ್ತರು ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ವಿನೂತನವಾಗಿ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Bharat Bundh: ತಲೆ ಮೇಲೆ ಇಟ್ಟಿಗೆಯನ್ನಿಟ್ಟುಕೊಂಡು ವಿನೂತನ ಪ್ರತಿಭಟನೆ - ಕೊಪ್ಪಳ ಸುದ್ದಿ
ರೈತ ಸಂಘದ ಮುಖಂಡ ನಜೀರಸಾಬ್ ಮೂಲಿಮನಿ ನೇತೃತ್ವದಲ್ಲಿ ತಲೆ ಮೇಲೆ ಇಟ್ಟಿಗೆಯನ್ನಿಟ್ಟುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಇನ್ನು ಬಸ್ ನಿಲ್ದಾಣದಲ್ಲಿದ್ದ ಕುರಿಗಾಯಿಯೊಬ್ಬ ಪ್ರತಿಭಟನಾಕಾರರಿಗೆ ನಮಸ್ಕಾರ ಮಾಡುವ ಮೂಲಕ ಹೋರಾಟಕ್ಕೆ ಜಯವಾಗಲಿ ಎಂದು ಹಾರೈಸಿದ್ದಾನೆ.
![Bharat Bundh: ತಲೆ ಮೇಲೆ ಇಟ್ಟಿಗೆಯನ್ನಿಟ್ಟುಕೊಂಡು ವಿನೂತನ ಪ್ರತಿಭಟನೆ koppal](https://etvbharatimages.akamaized.net/etvbharat/prod-images/768-512-13183784-thumbnail-3x2-mng.jpg)
ವಿನೂತನ ಪ್ರತಿಭಟನೆ
ತಲೆ ಮೇಲೆ ಇಟ್ಟಿಗೆಯನ್ನಿಟ್ಟುಕೊಂಡು ವಿನೂತನ ಪ್ರತಿಭಟನೆ
ರೈತ ಸಂಘದ ಮುಖಂಡ ನಜೀರಸಾಬ್ ಮೂಲಿಮನಿ ನೇತೃತ್ವದಲ್ಲಿ ತಲೆ ಮೇಲೆ ಇಟ್ಟಿಗೆಯನ್ನಿಟ್ಟುಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದರು. ಇನ್ನು ಬಸ್ ನಿಲ್ದಾಣದಲ್ಲಿದ್ದ ಕುರಿಗಾಯಿಯೊಬ್ಬ ಪ್ರತಿಭಟನಾಕಾರರಿಗೆ ನಮಸ್ಕಾರ ಮಾಡುವ ಮೂಲಕ ಹೋರಾಟಕ್ಕೆ ಜಯವಾಗಲಿ ಎಂದು ಹಾರೈಸಿದ್ದಾನೆ.
ಇನ್ನು ಸಾರಿಗೆ ಸಂಸ್ಥೆಯ ಬಸ್ಗಳು ಎಂದಿನಂತೆ ಸಂಚಾರ ಮಾಡುತ್ತಿದ್ದು 10 ಗಂಟೆಯ ನಂತರ ವಿವಿಧ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆ ನಡೆಸಲಿವೆ. ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ಸಂಚರಿಸಿ ಹೋಟೆಲ್ ಸೇರಿದಂತೆ ಅಂಗಡಿಗಳನ್ನು ಬಂದ್ ಮಾಡಿಸಿ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
Last Updated : Sep 27, 2021, 9:29 AM IST