ಕರ್ನಾಟಕ

karnataka

ETV Bharat / state

ಕೊಪ್ಪಳದ ಅಭಿಮಾನಿಯ ಎದೆ, ಬೆನ್ನ ಮೇಲೆ ಅರಳಿದ ಕೂಲ್‌ ಧೋನಿ - Die hard fan of cricketer M S Dhoni

ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಮಾರುತಿ, ಪ್ರತಿ ವರ್ಷ ಧೋನಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದರು. ಕಳೆದ ವರ್ಷದಿಂದ ಧೋನಿ ಹುಟ್ಟು ಹಬ್ಬದ ದಿನದಂದು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದು, ಈ ವರ್ಷವೂ ಹಾಕಿಸಿಕೊಂಡು ಮಾರುತಿ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ..

dhoni tato
ಕೊಪ್ಪಳದ ಅಭಿಮಾನಿಯ ಬೆನ್ನ ಮೇಲೆ ಅರಳಿದ ಧೋನಿ

By

Published : Jul 9, 2021, 6:51 AM IST

ಕೊಪ್ಪಳ :ಅಭಿಮಾನ ಅನ್ನೋದೆ ಹಾಗೆ. ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಮೇಲಿನ ಅಭಿಮಾನವನ್ನು ನಾನಾ ರೀತಿ ವ್ಯಕ್ತಪಡಿಸುತ್ತಾರೆ. ಅದರಂತೆಯೇ ಕ್ರಿಕೆಟಿಗ, ಭಾರತ ಕ್ರಿಕೆಟ್ ತಂಡದ ಕೂಲ್ ಕ್ಯಾಪ್ಟನ್ ಮಹೇಂದ್ರಸಿಂಗ್ ಧೋನಿ ಅಭಿಮಾನಿಯೊಬ್ಬ ಧೋನಿಯ ಟ್ಯಾಟೂ ಹಾಕಿಸಿಕೊಂಡು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದ ಮಾರುತಿ ಎಂಬ ಯುವಕ ತನ್ನ ದೇಹದ ಮೇಲೆ ಮಹೇಂದ್ರಸಿಂಗ್ ಧೋನಿ ಟ್ಯಾಟೂ ಹಾಕಿಸಿಕೊಂಡಿದ್ದಾನೆ. ಅದು ಧೋನಿ ಬರ್ತ್​ ಡೇ ದಿನದಂದು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಮಾರುತಿ ತನ್ನ ನೆಚ್ಚಿನ ಕ್ರಿಕೆಟಿಗನ ಜನ್ಮ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿದ್ದಾರೆ.

ಕೊಪ್ಪಳದ ಅಭಿಮಾನಿಯ ಎದೆ, ಬೆನ್ನ ಮೇಲೆ ಅರಳಿದ ಧೋನಿ

ಗಂಗಾವತಿ ನಗರದಲ್ಲಿರುವ ಆರ್ ಹೆಚ್ ಟ್ಯಾಟೂ ಸೆಂಟರ್​ನಲ್ಲಿ ಸುಮಾರು 8 ಗಂಟೆಗಳ ಅವಧಿ ಕುಳಿತು ಧೋನಿಯ ಟ್ಯಾಟೂ ಹಾಕಿಸಿಕೊಂಡಿದ್ದಾನೆ ಮಾರುತಿ. ಟ್ಯಾಟೂ ಸೆಂಟರ್ ಮಾಲೀಕ ರವಿ ಎಂಬುವರು ಮಾರುತಿಯ ದೇಹದ ಮೇಲೆ ಅಚ್ಚುಕಟ್ಟಾಗಿ ಎಂ ಎಸ್ ಧೋನಿಯ ಟ್ಯಾಟೂವನ್ನು ಮೂಡಿಸಿದ್ದಾರೆ.

ಧೋನಿಯ ಅಪ್ಪಟ ಅಭಿಮಾನಿಯಾಗಿರುವ ಮಾರುತಿ, ಪ್ರತಿ ವರ್ಷ ಧೋನಿಯ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದರು. ಕಳೆದ ವರ್ಷದಿಂದ ಧೋನಿ ಹುಟ್ಟು ಹಬ್ಬದ ದಿನದಂದು ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದು, ಈ ವರ್ಷವೂ ಹಾಕಿಸಿಕೊಂಡು ಮಾರುತಿ ತನ್ನ ಅಭಿಮಾನವನ್ನು ವ್ಯಕ್ತಪಡಿಸಿದ್ದಾನೆ.

ಇದನ್ನೂ ಓದಿ :ದೀಪದ ಮಸಿಯಲ್ಲೂ ಅರಳಿತು ಅದ್ಭುತ ಕಲಾಕೃತಿ..ಮರಗಳ ಮೇಲೂ ಯುವ ಕಲಾವಿದನ ಕೈಚಳಕ

ABOUT THE AUTHOR

...view details