ಕರ್ನಾಟಕ

karnataka

ETV Bharat / state

ಕೋವಿಡ್​​ ಹೆಚ್ಚಳ: 2 ವಾರಗಳ ಕಾಲ ಅಂಜನಾದ್ರಿ ದೇಗುಲಕ್ಕೆ ಪ್ರವೇಶ ನಿಷೇಧ - Gangavathi

ಕೊರೊನಾ ಮೂರನೇ ಅಲೆ ಎಲ್ಲೆಡೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ, ಆ.2ರಿಂದ ಎರಡು ವಾರಗಳ ಕಾಲ ಮತ್ತೆ ದೇಗುಲ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ..

Devotees no entry for Anjanadri Temple
ಅಂಜನಾದ್ರಿ ದೇಗುಲ

By

Published : Aug 1, 2021, 9:37 PM IST

ಗಂಗಾವತಿ : ಲಾಕ್​ಡೌನ್ ಸಡಲಿಕೆಯಿಂದಾಗಿ ನಿತ್ಯ ಸಾವಿರಾರು ಭಕ್ತರು ಸೇರುವ ಮತ್ತು ನಿತ್ಯ ಜನಸಂದಣಿ ಸ್ಥಳವಾಗಿರುವ ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿ ದೇಗುಲ ಪ್ರವೇಶ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಆದೇಶ ಪ್ರತಿ

ಕೊರೊನಾ ಮೂರನೇ ಅಲೆ ಎಲ್ಲೆಡೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ, ಆ.2ರಿಂದ ಎರಡು ವಾರಗಳ ಕಾಲ ಮತ್ತೆ ದೇಗುಲ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಲಾಕ್​ಡೌನ್​ ಸಡಲಿಕೆಯ ಬಳಿಕ ಉತ್ತರ ಭಾರತ ಸೇರಿದಂತೆ ಹೊರ ಜಿಲ್ಲೆಗಳಿಂದ ನಿತ್ಯ ಸಾವಿರಾರು ಪ್ರವಾಸಿಗರು ಅಂಜನಾದ್ರಿ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಹೀಗಾಗಿ, ಜನ ಜಂಗುಳಿ ನಿಯಂತ್ರಿಸುವ ಉದ್ದೇಶಕ್ಕೆ ಜಿಲ್ಲಾಡಳಿತ ಈ ನಿಯಂತ್ರಣ ಕ್ರಮಕೈಗೊಂಡಿದೆ.

ಇದನ್ನೂ ಓದಿ:ರಾಜ್ಯದಲ್ಲಿಂದು 1,875 ಮಂದಿಗೆ ಕೋವಿಡ್ ದೃಢ : 25 ಸೋಂಕಿತರು ಬಲಿ

ABOUT THE AUTHOR

...view details