ಕರ್ನಾಟಕ

karnataka

ETV Bharat / state

ಹನುಮ ಮಾಲಾಧಾರಿಗಳ ಬಸ್ ತಡೆದ ಪೊಲೀಸರು: ನಿಷೇಧದ ನಡುವೆಯೂ ಅಂಜನಾದ್ರಿಯಲ್ಲಿ ಮಾಲಾ ವಿಸರ್ಜನೆ - ಜಿಲ್ಲಾಡಳಿತದ ನಿಷೇಧದ ನಡುವೆಯೂ ಹನುಮ‌ಮಾಲಾ ವಿಸರ್ಜನೆ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಇಂದು ಹನುಮಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ತೆರಳುತ್ತಿದ್ದ ಹನುಮ ಮಾಲಾಧಾರಿಗಳ ಬಸ್ ಅನ್ನು ಪೊಲೀಸರು ತಡೆದಿದ್ದಾರೆ.

Hanuman Mala Visarjana
ಅಂಜನಾದ್ರಿ ಪರ್ವತದಲ್ಲಿ ನಿಷೇಧದ ನಡುವೆಯೂ ಹನುಮ‌ಮಾಲಾ ವಿಸರ್ಜನೆ

By

Published : Dec 16, 2021, 10:08 AM IST

ಕೊಪ್ಪಳ: ಅಂಜನಾದ್ರಿಗೆ ತೆರಳುತ್ತಿದ್ದ ಹನುಮ ಮಾಲಾಧಾರಿಗಳ ಬಸ್ ಅನ್ನು ಪೊಲೀಸರು ತಡೆದ ಘಟನೆ ಕೊಪ್ಪಳ ತಾಲೂಕಿನ ಶಿವಪುರ ಗ್ರಾಮದ ಬಳಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಪೌರಾಣಿಕ ಹಾಗೂ ಐತಿಹಾಸಿಕ ಅಂಜನಾದ್ರಿ ಪರ್ವತದಲ್ಲಿ ಇಂದು ಹನುಮಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ನಿಷೇಧ ಹೇರಿದ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ತೆರಳುತ್ತಿದ್ದ ಹನುಮ ಮಾಲಾಧಾರಿಗಳ ಬಸ್ ಅನ್ನು ಪೊಲೀಸರು ತಡೆದಿದ್ದಾರೆ.

ಅಂಜನಾದ್ರಿ ಪರ್ವತದಲ್ಲಿ ನಿಷೇಧದ ನಡುವೆಯೂ ಹನುಮ‌ಮಾಲಾ ವಿಸರ್ಜನೆ

ಗದಗ ಜಿಲ್ಲೆಯ ನರಗುಂದದಿಂದ ಬಸ್​ಗಳಲ್ಲಿ ಹನುಮ ಮಾಲಾಧಾರಿಗಳು ಮಾಲಾ ವಿಸರ್ಜನೆಗಾಗಿ ಅಂಜನಾದ್ರಿಗೆ ತೆರಳುತ್ತಿದ್ದರು. ಈ ವೇಳೆ ಪೊಲೀಸರು ಬಸ್ ತಡೆದಿದ್ದು, ಪರಿಣಾಮ ಪೊಲೀಸರು ಮತ್ತು ಹನುಮಮಾಲಾಧಾರಿಗಳ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು. ಕೊನೆಗೆ ಪೊಲೀಸರ ವಿರೋಧದ ನಡುವೆ ಹನುಮ ಮಾಲಾಧಾರಿಗಳು ಬಸ್ ತೆಗೆದುಕೊಂಡು ಅಂಜನಾದ್ರಿ ಕಡೆಗೆ ತೆರಳಿದರು.

ಜಿಲ್ಲಾಡಳಿತದ ನಿಷೇಧದ ನಡುವೆಯೂ ಹನುಮ‌ಮಾಲಾ ವಿಸರ್ಜನೆ:

ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಂದು ಅಂಜನಾದ್ರಿಯಲ್ಲಿ ಹನುಮಮಾಲಾ ವಿಸರ್ಜನೆಗೆ ನಿಷೇಧ ಹೇರಿ ಆದೇಶ ಹೊರಡಿಸಿತ್ತು. ಜಿಲ್ಲಾಡಳಿತದ ಈ ಆದೇಶಕ್ಕೆ ಹನುಮ ಭಕ್ತರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಹಿಂದೂ ಪರ ಸಂಘಟನೆಗಳ ಕೆಲ ಮುಖಂಡರು ಜಿಲ್ಲಾಡಳಿತದ ವಿರುದ್ಧ ಗುಡುಗಿದ್ದಾರೆ.

ನಿಷೇಧದ ನಡುವೆಯೂ ಜಿಲ್ಲೆ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸಿದ್ದಾರೆ. ಇಂದು ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಭೇಟಿ ನೀಡಿ ಹನುಮ ಮಾಲೆ ವಿಸರ್ಜಿಸಿ, ವ್ರತ ಪೂರ್ಣಗೊಳಿಸುವ ಜೊತೆಗೆ ಅಂಜನಾದ್ರಿ ಪರ್ವತವನ್ನೇರಿ ಆಂಜನೇಯನ ದರ್ಶನ ಪಡೆದುಕೊಳ್ಳುತ್ತಿದ್ದಾರೆ.‌

ABOUT THE AUTHOR

...view details