ಕೊಪ್ಪಳ : ಶ್ರಾವಣ ಮಾಸದ ಮೊದಲ ಶನಿವಾರವಾದ ಹಿನ್ನೆಲೆ ಜಿಲ್ಲೆಯ ಪೌರಾಣಿಕ ಹಿನ್ನೆಲೆಯುಳ್ಳ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ನೂರಾರು ಭಕ್ತರು ಬಂದು ದೇವರ ದರ್ಶನ ಪಡೆದುಕೊಂಡರು.
ಶ್ರಾವಣ ಮಾಸದ ಮೊದಲ ಶನಿವಾರವೆಂದು ಆಂಜನೇಯನ ದರ್ಶನ ಪಡೆದ ಭಕ್ತರು - Anjanadri Anjaneya temple
ಶ್ರಾವಣ ಮಾಸದ ಮೊದಲ ಶನಿವಾರವಾದ ಹಿನ್ನೆಲೆ ಜಿಲ್ಲೆಯ ಪೌರಾಣಿಕ ಹಿನ್ನೆಲೆಯುಳ್ಳ ಅಂಜನಾದ್ರಿಯ ಆಂಜನೇಯ ದೇವಸ್ಥಾನಕ್ಕೆ ನೂರಾರು ಭಕ್ತರು ಆಗಮಿಸಿ ದೇವರ ದರ್ಶನ ಪಡೆದುಕೊಂಡರು.
ಅಂಜನಾದ್ರಿಯ ಆಂಜನೇಯ
ಬೆಳಗ್ಗೆಯಿಂದಲೇ ಅಂಜನಾದ್ರಿಯಲ್ಲಿ ಹನುಮ ಭಕ್ತರು ಆಂಜನೇಯನ ದರ್ಶನ ಪಡೆದು ಪುನೀತರಾದರು. ಶ್ರಾವಣ ಮಾಸದ ಕಾರಣ ದೇವಾಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದ್ದು, ಆಂಜನೇಯ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ದೇವರ ದರ್ಶನಕ್ಕೆ ಬಂದ ಭಕ್ತರಿಗೆ ತೀರ್ಥ, ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸುಮಾರು ಐನೂರಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಅಂಜನಾದ್ರಿ ಪರ್ವತವನ್ನೇರಿ ಭಕ್ತರು ಸಂತಸ ವ್ಯಕ್ತಪಡಿಸಿದರು.