ಕರ್ನಾಟಕ

karnataka

ETV Bharat / state

ಅಂಜನಾದ್ರಿಯಲ್ಲಿ ಸರ್ಕಾರದ ಅಭಿವೃದ್ಧಿ ಕಾಮಗಾರಿ ಕಾಂಕ್ರೀಟ್ ಮಯವಾಗದಿರಲಿ: ಶ್ರೀಕೃಷ್ಣದೇವರಾಯ - ಅಂಜನಾದ್ರಿಯಲ್ಲಿ ಸರ್ಕಾರದ ಅಭಿವೃದ್ಧಿ ಕಾಮಗಾರಿ

ನೈಸರ್ಗಿಕ ಮತ್ತು ಪಾರಂಪರಿಕ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕಟ್ಟಡಗಳು ಬಹುಮಹಡಿ ಹೊಂದಿರದೇ ಕೇವಲ ಒಂದೇ ಮಹಡಿಗೆ ಸೀಮಿತಗೊಳಿಸಬೇಕು. ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕೇವಲ ಕಾಂಕ್ರೀಟ್ ಮಯವಾಗುತ್ತಿದೆ ಎಂದು ಆನೆಗೊಂದಿಯ ಅರಸು ಮನೆತನದ ಶ್ರೀಕೃಷ್ಣದೇವರಾಯ ಹೇಳಿದ್ದಾರೆ.

Srikrishna Devaraya
ಅರಸು ಮನೆತನದ ಶ್ರೀಕೃಷ್ಣದೇವರಾಯ

By

Published : Nov 2, 2022, 12:45 PM IST

Updated : Nov 2, 2022, 1:02 PM IST

ಗಂಗಾವತಿ (ಕೊಪ್ಪಳ):ವಿಶ್ವಖ್ಯಾತಿ ಪಡೆದಿರುವ ಗಂಗಾವತಿ ತಾಲೂಕಿನ ಅಂಜನಾದ್ರಿ ದೇಗುಲದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಆಸಕ್ತಿ ವಹಿಸಿದೆ. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ ಇದೀಗ ಅಂಜನಾದ್ರಿಯಲ್ಲಿ ಸರ್ಕಾರದ ಉದ್ದೇಶಿತ ಅಭಿವೃದ್ಧಿಗೆ ಆನೆಗೊಂದಿಯ ಅರಸು ಪರಿವಾರ ವಿರೋಧ ವ್ಯಕ್ತಪಡಿಸುತ್ತಿದೆ.

ಆನೆಗೊಂದಿಯ ಅರಸು ಮನೆತನದ ಶ್ರೀಕೃಷ್ಣದೇವರಾಯ

ಈ ಬಗ್ಗೆ ಮಾತನಾಡಿರುವ ಆನೆಗೊಂದಿ ಅರಸರ ಮನೆತನದ ಶ್ರೀಕೃಷ್ಣದೇವರಾಯ ಅವರು, ಸರ್ಕಾರ ಕೈಗೊಳ್ಳುತ್ತಿರುವ ಅಭಿವೃದ್ಧಿ ಕೇವಲ ಕಾಂಕ್ರೀಟ್ ಮಯವಾಗದಿರಲಿ. ಇದರ ಬದಲಿಗೆ ನೈಸರ್ಗಿಕ ಮತ್ತು ಪಾರಂಪರಿಕ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಕಟ್ಟಡಗಳು ಬಹುಮಹಡಿ ಹೊಂದಿರದೇ ಕೇವಲ ಒಂದೇ ಮಹಡಿಗೆ ಸೀಮಿತಗೊಳಿಸಬೇಕು. ಮುಖ್ಯವಾಗಿ ಅಭಿವೃದ್ಧಿ ಬೆಟ್ಟದ ಸುತ್ತಲೂ ದೊಡ್ಡ ಪ್ರಮಾಣದಲ್ಲಿ ನಡೆದ್ರೆ, ಇದರಿಂದ ನೈಸರ್ಗಿಕ ಸೊಬಗಿಗೆ ಧಕ್ಕೆಯಾಗಲಿದೆ.

ಇದರ ಬದಲಿಗೆ ಸುತ್ತಲಿನ ಎರಡು ಮೂರು ಕಿಲೋ ಮೀಟರ್ ಅಂತರದಲ್ಲಿ ನಾನಾ ಸಮುಚ್ಛಯಗಳು ತಲೆ ಎತ್ತಬೇಕು. ಮುಖ್ಯವಾಗಿ ಥೀಮ್​​ ಪಾರ್ಕ್​ಗೆ ಪ್ರತ್ಯೇಕ ಸ್ಥಳ ನಿಗದಿ ಮಾಡಬೇಕು. ಇಲ್ಲವಾದಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಪೌರಾಣಿಕೆ ದೇಗುಲ ಕಾಂಕ್ರೀಟ್ ಕಾಡಾಗಲಿದೆ ಎಂದು ರಾಜವಂಶಸ್ಥ ಶ್ರೀಕೃಷ್ಣದೇವರಾಯ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಅಂಜನಾದ್ರಿ ಬೆಟ್ಟಕ್ಕೆ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಭೇಟಿ

Last Updated : Nov 2, 2022, 1:02 PM IST

ABOUT THE AUTHOR

...view details