ಕರ್ನಾಟಕ

karnataka

ETV Bharat / state

ಜೂಜುಕೋರರ ಮೇಲೆ ಪೊಲೀಸರ ಭರ್ಜರಿ ದಾಳಿ : ₹1.55 ಲಕ್ಷ ಹಣ ವಶ - Detention of gambling accused at Gangavathi

ಚಿಕ್ಕಜಂತಕ್ಕಲ್ ಗ್ರಾಮದ ಚಂದ್ರಪ್ಪ ಅಗಸರ ಎಂಬ ರೈತನಿಗೆ ಸೇರಿದ ಹೊಲದ ಶೆಡ್​​​ನಲ್ಲಿ ಜೂಜುಕೋರರು ಸೇರಿ ಕಾನೂನು ಬಾಹಿರ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಒಟ್ಟು 1,55,65,600 ನಗದು ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

detention-of-gambling-accused-at-gangavathi
ಜೂಜುಕೋರರ ಮೇಲೆ ಪೊಲೀಸರ ಭರ್ಜರಿ ದಾಳಿ

By

Published : Nov 30, 2020, 8:32 PM IST

ಗಂಗಾವತಿ: ರೈತರೊಬ್ಬರ ಹೊಲದಲ್ಲಿ ಅಕ್ರಮವಾಗಿ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ದಾಳಿ ಮಾಡಿದ ಗ್ರಾಮೀಣ ಪೊಲೀಸರು 1.55 ಲಕ್ಷ ರೂಪಾಯಿ ನಗದು, ಎಂಟು ದ್ವಿಚಕ್ರ ವಾಹನ ಹಾಗೂ ಎರಡು ಕಾರುಗಳನ್ನು ವಶಕ್ಕೆ ಪಡೆದ ಘಟನೆ ಸಮೀಪದ ಚಿಕ್ಕಜಂತಕಲ್​ನಲ್ಲಿ ನಡೆದಿದೆ.

ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳ ಬಂಧನ

ಚಿಕ್ಕಜಂತಕ್ಕಲ್ ಗ್ರಾಮದ ಚಂದ್ರಪ್ಪ ಅಗಸರ ಎಂಬ ರೈತನಿಗೆ ಸೇರಿದ ಹೊಲದ ಶೆಡ್​​​ನಲ್ಲಿ ಜೂಜುಕೋರರು ಸೇರಿ ಕಾನೂನು ಬಾಹಿರ ಅಂದರ್ ಬಾಹರ್ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಒಟ್ಟು 1,55,65,600 ನಗದು ಹಾಗೂ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಜೂಜಾಟದಲ್ಲಿ ತೊಡಗಿದ್ದ ಆರೋಪಿಗಳ ಬಂಧನ

ಬಂಧಿತ ಆರೋಪಿಗಳನ್ನು ಮಹಾಂತೇಶ ಸಂಗಪ್ಪ ಡಂಗೂರ ಮುಜಾವರ ಕ್ಯಾಂಪ್, ಶೇಖ್ ಭಾಷಾ ಮಹೆಬೂಬಸುಬಾನಿ ಕೃಷ್ಣಾನಗರ ಬಳ್ಳಾರಿ, ಶ್ರೀನಿವಾಸ ಕೃಷ್ಣಾರಾವ್ ಅಯೋಧ್ಯಾ, ಮನೋಹರ ಪ್ರಸಾದ್ ಅಯೋಧ್ಯಾ, ಸುರೇಶ ಶ್ರೀನಿವಾಸ ಅಯೋಧ್ಯಾ, ನಾಗರಾಜ್ ಪರಶುರಾಮಪ್ಪ ಕಂಪ್ಲಿ, ಮೋಹನ್ ಕುಮಾರ ಚಿಟ್ಟಿಬಾಬು ಶ್ರೀರಾಮನಗರ ಎಂದು ಗುರುತಿಸಲಾಗಿದೆ.

ಯುನಿಕಾರ್ನರ್​, ಸ್ಪ್ಲೆಂಡರ್​, ಸ್ಪ್ಲೆಂಡರ್ ಪ್ಲಸ್, ಸ್ಪ್ಲೆಂಡರ್ ಹೆಚ್ಎಫ್, ಆಕ್ಟೀವ್ ಹೊಂಡಾ, ಹೊಂಡಾ ಶೈನ್, ಪಲ್ಸರ್, ಫ್ಯಾಶನ್ ಪ್ರೋ, ಬಜಾಜ್ ಪ್ಲಾಟಿನಾ ಹಾಗೂ ಎರಡು ಲಕ್ಷ ಮೌಲ್ಯದ ಎರಡು ಕಾರು ಸೇರಿದಂತೆ ಒಟ್ಟು ಹದಿನೈದು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

...view details