ಕರ್ನಾಟಕ

karnataka

ETV Bharat / state

ಪವರ್​ ಕಟ್​ ಸಮಸ್ಯೆ: ಶಿಕ್ಷಣ ಇಲಾಖೆಯಿಂದ ಪರ್ಯಾಯ ಮಾರ್ಗ - new scheme to provide electricity to students

ಗಂಗಾವತಿಯ ಗ್ರಾಮೀಣ ಭಾಗದಲ್ಲಿನ ವಿದ್ಯುತ್ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಮಸ್ಯೆ ಎದುರಾಗಿದ್ದರಿಂದ ಶಾಲೆಗಳಲ್ಲಿನ ಯುಪಿಎಸ್​, ಸೋಲಾರ್​ ಬಳಸಿಕೊಂಡು ಓದಲು ಬಿಇಒ ಸೂಚಿಸಿದ್ದಾರೆ.

Department of Education new scheme to provide electricity
ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ

By

Published : Dec 19, 2019, 4:37 PM IST

ಗಂಗಾವತಿ: ಗ್ರಾಮೀಣ ಭಾಗದಲ್ಲಿ ಆಗಾಗ ಕೈಕೊಡುವ ವಿದ್ಯುತ್​ನಿಂದಾಗಿ​ ಮಕ್ಕಳ ವಿದ್ಯಾಭ್ಯಾಸದ ಮೇಲೆ ಅಡ್ಡಪರಿಣಾಮ ಬೀರುತ್ತಿದ್ದ ಕಾರಣ ಶಿಕ್ಷಣ ಇಲಾಖೆ ಹೊಸದೊಂದು ಐಡಿಯಾ ಹುಡುಕಿದೆ. ಮುಖ್ಯವಾಗಿ ಪರೀಕ್ಷೆ ಸಂದರ್ಭದಲ್ಲಿ ಎದುರಿಸುವ ವಿದ್ಯುತ್ ಕೊರತೆಯನ್ನು ನೀಗಿಸಲು ಶಾಲೆಗಳಲ್ಲಿ ಕರೆಂಟ್​​ ಸೌಲಭ್ಯ ಕಲ್ಪಿಸುತ್ತಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ

ಇದಕ್ಕಾಗಿಯೇ ಶಿಕ್ಷಣ ಇಲಾಖೆ ಈ ಬಾರಿ ಪರ್ಯಾಯ ಬೆಳಕು ನೀಡುವ ಸಾಧನ, ಸಲಕರಣೆಗಳನ್ನು ಬಳಸಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉಪಾಯ ಹುಡುಕಿದೆ.

ಗ್ರಾಮೀಣ ಭಾಗದ ಯಾವ ಶಾಲೆಗಳಲ್ಲಿ ಯುಪಿಎಸ್ ಮತ್ತು ಸೋಲಾರ್ ಸೌಲಭ್ಯವಿದೆಯೋ, ಆ ಶಾಲೆಗಳಲ್ಲಿ ಮಕ್ಕಳಿಗೆ ರಾತ್ರಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಅಲ್ಲಿನ ಶಿಕ್ಷಕರಿಗೆ ಈಗಾಗಲೇ ಬಿಇಒ ಸೂಚನೆ ನೀಡಿದ್ದಾರೆ. ಬೆಳಗ್ಗೆ10 ರಿಂದ ಸಂಜೆ 7ವರೆಗೆ ಶಾಲೆಗಳಲ್ಲಿ ವಿದ್ಯುತ್ ಬಳಸಿಕೊಳ್ಳಬಹುದು. ರಾತ್ರಿ ವೇಳೆಯಲ್ಲಿ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಬಿಇಒ ಸೋಮಶೇಖರಗೌಡ ತಿಳಿಸಿದ್ದಾರೆ.

ABOUT THE AUTHOR

...view details