ಕರ್ನಾಟಕ

karnataka

ETV Bharat / state

ಹನುಮಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ಅವಕಾಶ ನೀಡಬೇಕು: ಶ್ರೀರಾಮಸೇನೆ ಆಗ್ರಹ - Shriramasene

ಡಿಸೆಂಬರ್​​​​ನಲ್ಲಿ ಸಾವಿರಾರು ಹನುಮ ಮಾಲಾಧಿಕಾರಿಗಳು ಕೊಪ್ಪಳ ಜಿಲ್ಲೆಯ ಅಂಜನಾದ್ರಿಗೆ ಬರಲಿದ್ದಾರೆ. ಹೀಗಾಗಿ, ಅದಕ್ಕೆ ಅನುಮತಿ ನೀಡಬೇಕೆಂದು ಜಿಲ್ಲಾಡಳಿತಕ್ಕೆ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಒತ್ತಾಯಿಸಿದರು.

press meet by Shrirama district president
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸಂಜೀವ ಮರಡಿ

By

Published : Nov 4, 2020, 2:10 PM IST

ಕೊಪ್ಪಳ: ನವೆಂಬರ್ 10 ರಿಂದ ಹನುಮಮಾಲಾ ಧಾರಣೆಯ ವ್ರತ ಆರಂಭವಾಗಲಿದ್ದು, ಡಿಸೆಂಬರ್​​​​ನಲ್ಲಿ ಮಾಲೆಯ ವಿಸರ್ಜನೆ ನಡೆಯಲಿದೆ. ಸಾವಿರಾರು ಹನುಮ ಮಾಲಾಧಾರಿಗಳು ಜಿಲ್ಲೆಯ ಅಂಜನಾದ್ರಿಗೆ ಬರುತ್ತಾರೆ. ಹೀಗಾಗಿ, ಹನುಮಮಾಲಾ ವಿಸರ್ಜನೆಗೆ ಜಿಲ್ಲಾಡಳಿತ ಅವಕಾಶ ನೀಡಬೇಕು ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊರೊನಾ ಇದ್ದರೂ ರಾಜಕೀಯ ಕಾರ್ಯಕ್ರಮಗಳಿಗೆ, ಚುನಾವಣೆ ಪ್ರಚಾರಕ್ಕೆ ಸಾಕಷ್ಟು ಜನರು ಸೇರುತ್ತಾರೆ. ಅಂತಹವುಗಳಿಗೆ ಸರ್ಕಾರ ಅನುಮತಿ ನೀಡುತ್ತದೆ. ಆದರೆ, ಧಾರ್ಮಿಕ ಕಾರ್ಯಕ್ರಮಗಳಿಗೆ ಯಾಕೆ ಅವಕಾಶ ನೀಡಲ್ಲವೆಂದು ಪ್ರಶ್ನಿಸಿದರು.

ನ.10ರಿಂದ 48 ದಿನಗಳ ಈ ವ್ರತದಲ್ಲಿ ರಾಜ್ಯದ ನಾನಾ ಕಡೆ ಸಾವಿರಾರು ಹನುಮಭಕ್ತರು ಮಾಲೆ ಧರಿಸುತ್ತಾರೆ. ಅಲ್ಲದೆ, ಮಾಲಾ ವಿಸರ್ಜನೆಗೆ ಅಂಜನಾದ್ರಿಗೆ ಬರುತ್ತಾರೆ. ಈ ಕುರಿತು ಜಿಲ್ಲಾಡಳಿತ ಈಗಲೇ ನಿರ್ಧಾರ ಪ್ರಕಟಿಸಬೇಕು. ಹನುಮಾಲಾ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸಂಜೀವ ಮರಡಿ

ಕೋವಿಡ್ ಮಾರ್ಗಸೂಚಿಯಂತೆಯೇ ಹನುಮ ಮಾಲಾ ವಿಸರ್ಜನೆ ಮಾಡುತ್ತೇವೆ. ಕೋವಿಡ್ ನೆಪವೊಡ್ಡಿ ಜಿಲ್ಲಾಡಳಿತ ಅವಕಾಶ ನೀಡದಿದ್ದರೂ ಮಾಲೆಯನ್ನು ವಿಸರ್ಜಿಸುತ್ತೇವೆ ಎಂದು ಸಂಜೀವ ಮರಡಿ ಹೇಳಿದರು.

ABOUT THE AUTHOR

...view details