ಕುಷ್ಟಗಿ(ಕೊಪ್ಪಳ):ಪಟ್ಟಣದ ಹೊರವಲಯದ ಕೃಷ್ಣಗಿರಿ ಕಾಲೋನಿ ಬಳಿ ಇರುವ ಅಂಡರ್ ಪಾಸ್ಗೆ ಮೇಲ್ಛಾವಣಿ ಅಳವಡಿಸಲು ಗುತ್ತಿಗೆ ಪಡೆದುಕೊಂಡಿರುವ ಓಎಸ್ಇ ಕಂಪನಿ ಮೀನಾ ಮೇಷ ಎನಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಅಂಡರ್ಪಾಸ್ಗೆ ಮೇಲ್ಛಾವಣಿ ಅಳವಡಿಸಲು ಮೀನಾಮೇಷ.. ಗುತ್ತಿಗೆದಾರ ಕಂಪನಿ ವಿರುದ್ಧ ಆಕ್ರೋಶ - Delay in installing the roof to underpass
ಶೀಘ್ರದಲ್ಲಿ ಅಂಡರ್ ಪಾಸ್ ಮೇಲ್ಛಾವಣಿಗೆ ಟಿನ್ ಸೀಟ್ ಹಾಕಿಸುವುದಾಗಿ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ಮೇ 2ರಂದು ಸಂಸದ ಕರಡಿ ಸಂಗಣ್ಣ ಅವರಿಗೆ ತಿಳಿಸಿತ್ತು. ಆದರೆ, ಈವರೆಗೆ ಕಂಪನಿಯ ಅಧಿಕಾರಿಗಳು ಆ ಸಂಬಂಧ ಯಾವುದೇ ಕೆಲಸ ಪ್ರಾರಂಭಿಸಿಲ್ಲ.
ಶೀಘ್ರದಲ್ಲಿ ಅಂಡರ್ ಪಾಸ್ ಮೇಲ್ಛಾವಣಿಗೆ ಟಿನ್ ಸೀಟ್ ಹಾಕಿಸುವುದಾಗಿ ಗುತ್ತಿಗೆ ಪಡೆದುಕೊಂಡಿರುವ ಕಂಪನಿಯು ಮೇ 2ರಂದು ಸಂಸದ ಕರಡಿ ಸಂಗಣ್ಣ ಅವರಿಗೆ ತಿಳಿಸಿತ್ತು. ಆದರೆ, ಈವರೆಗೆ ಕಂಪನಿಯ ಅಧಿಕಾರಿಗಳು ಆ ಸಂಬಂಧ ಯಾವುದೇ ಕೆಲಸ ಪ್ರಾರಂಭಿಸಿಲ್ಲ. ಹೀಗಾಗಿ ಸೀಟ್ ಹಾಕಲು ಅಳವಡಿಸಿರುವ ಕಬ್ಬಿಣ ಮಾತ್ರ ಅಸ್ಥಿಪಂಜರದಂತೆ ಕಾಣುತ್ತಿದೆ. ಸ್ವಲ್ಪ ಮಳೆಯಾದರೆ ಸಾಕು ನೀರು ತುಂಬಿ ಜನರು ಸಂಚರಿಸಲಾಗದ ಸ್ಥಿತಿ ನಿರ್ಮಾಣವಾಗುತ್ತಿದೆ.
ಅಂಡರ್ ಪಾಸ್ ಒಳಗಡೆ ನೀರು ತುಂಬಿದರೆ ಜನರು ಹೆದ್ದಾರಿ ದಾಟಿ ಹೋಗಬೇಕಾದ ಅನಿವಾರ್ಯತೆಯಿದೆ. ಈ ಸಂದರ್ಭದಲ್ಲಿ ಪ್ರಾಣ ಹಾನಿ ಏನಾದರೂ ಸಂಭವಿಸಿದರೆ ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆ ವಹಿಸಿಕೊಂಡಿರುವ ಓರಿಯಂಟಲ್ ಕಂಪನಿ ನೇರ ಹೊಣೆ ಎಂದು ವಾರ್ಡ್ ಸದಸ್ಯೆ ಗೀತಾ ಮಹೇಶ್ ಕೋಳೂರು ಎಚ್ಚರಿಸಿದ್ದಾರೆ.