ಕರ್ನಾಟಕ

karnataka

By

Published : Sep 10, 2020, 9:06 PM IST

ETV Bharat / state

ಕುಷ್ಟಗಿ: ಕೋವಿಡ್-19 ಮಾರ್ಗಸೂಚಿಯನ್ವಯ ಸೆ.13 ರಿಂದ ಪದವಿ ಪರೀಕ್ಷೆ ಶುರು

ಸೆ.13ರಿಂದ ಪದವಿಯ ಅಂತಿಮ ಹಂತದ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಕೋವಿಡ್ ಸವಾಲಿನ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರದ ಮಾರ್ಗಸೂಚಿಯನ್ವಯ ಪರೀಕ್ಷೆಗೆ ಸಿದ್ಧವಾಗಿದೆ.

ಕುಷ್ಟಗಿ
ಕುಷ್ಟಗಿ

ಕುಷ್ಟಗಿ(ಕೊಪ್ಪಳ) :ಸೆ.13 ರಿಂದ ಪದವಿಯ ಅಂತಿಮ ಹಂತದ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಕೋವಿಡ್ ಸವಾಲಿನ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ಸರ್ಕಾರದ ಮಾರ್ಗಸೂಚಿಯನ್ವಯ ಪರೀಕ್ಷೆಗೆ ಸಿದ್ಧವಾಗಿದೆ.

ಕುಷ್ಟಗಿ, ತಾವರಗೇರಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ರಿಪೀಟರ್ಸ್ ಸೇರಿದಂತೆ ಬಿಎ ವ್ಯಾಸಂಗ ಮಾಡುತ್ತಿರುವ 170 ಹಾಗೂ ಬಿಕಾಂ ವ್ಯಾಸಂಗ ಮಾಡುತ್ತಿರುವ 80 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಪ್ರತಿ ಕೊಠಡಿಯಲ್ಲಿ 30ರಂತೆ ವಿದ್ಯಾರ್ಥಿಗಳು ಇರಲಿದ್ದು, 14 ಕೊಠಡಿಗಳನ್ನು ಬಳಸಿಕೊಳ್ಳಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಮುನ್ನ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದ್ದು, ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಲಕ್ಷಣಗಳಿದ್ದರೆ ಪ್ರತ್ಯೇಕ ವಿಶೇಷ ಕೊಠಡಿ ವ್ಯವಸ್ಥೆ ಹಾಗೂ ಕಂಟೋನ್ಮೆಂಟ್ ಪ್ರದೇಶದಿಂದ ಬಂದವರಿಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಬಿಎ, ಬಿಕಾಂ, ಬಿಇಡಿ ಹಾಗೂ ರಿಪೀಟರ್ಸ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಿಎ ಪರೀಕ್ಷೆ ವೇಳೆ ಬಿ.ಕಾಂ ರಿಪೀಟರ್ಸ್, ಬಿಕಾಂ ಪರೀಕ್ಷೆಯಲ್ಲಿ ಬಿ.ಎ. ರಿಪೀಟರ್ಸ್ ಗಳಿಗೆ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಚಾರ್ಯ ಬಿ.ಎಂ. ಕಂಬಳಿ ಮಾಹಿತಿ ನೀಡಿದರು.

ABOUT THE AUTHOR

...view details