ಕರ್ನಾಟಕ

karnataka

ETV Bharat / state

ಗಂಗಾವತಿ: ನಿರುಪಯುಕ್ತ ಸ್ಥಿತಿಯಲ್ಲಿ ಪತ್ತೆಯಾದ ಸಾವಿರಾರು ನೋಟುಗಳು! - ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ

ಕಳೆದ ಮೂರು ತಿಂಗಳ ಹಿಂದೆ ಕಾಣಿಕೆ ಪೆಟ್ಟಿಗೆ ತೆರೆದು ಹಣ ಎಣಿಕೆ ಮಾಡಲಾಗಿತ್ತು. ಆಗ ಎಲ್ಲವೂ ಸಹಜವಾಗಿತ್ತು. ಆದರೆ ಗುರುವಾರ ಕಾಣಿಕೆ ಪೆಟ್ಟಿಗೆ ತೆಗೆದು ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಹತ್ತರಿಂದ ನೂರು ರೂಪಾಯಿ ಮೌಲ್ಯದ ಸಾವಿರಾರು ನೋಟುಗಳು ವಿರೂಪವಾಗಿವೆ.

Defaced temple notes
ವಿರೂಪಗೊಂಡ ದೇವಾಲಯದ ನೋಟುಗಳು

By

Published : Dec 22, 2022, 4:20 PM IST

Updated : Dec 22, 2022, 4:55 PM IST

ವಿರೂಪಗೊಂಡ ದೇವಾಲಯದ ನೋಟುಗಳು

ಗಂಗಾವತಿ(ಕೊಪ್ಪಳ):ಕಾಣಿಕೆಯ ಹುಂಡಿಯಲ್ಲಿ ಭಕ್ತರು ಹಾಕಿದ್ದ ದೇಣಿಗೆಯ ಸಾವಿರಾರು ನೋಟುಗಳು ನಾಶವಾಗಿದ್ದು, ನಿರುಪಯುಕ್ತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಲ್ಲಿನ ಗ್ರಾಮ ದೇವತೆ ದುರ್ಗಾದೇವಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಪತ್ತೆಯಾಗಿದೆ.

ಕಳೆದ ಮೂರು ತಿಂಗಳ ಹಿಂದೆ ಕಾಣಿಕೆ ಪೆಟ್ಟಿಗೆ ತೆರೆದು ಹಣ ಎಣಿಕೆ ಮಾಡಲಾಗಿತ್ತು. ಆಗ ಎಲ್ಲವೂ ಸಹಜವಾಗಿತ್ತು. ಆದರೆ ಗುರುವಾರ ಕಾಣಿಕೆ ಪೆಟ್ಟಿಗೆ ತೆಗೆದು ಹಣ ಎಣಿಕೆ ಮಾಡುವ ಸಂದರ್ಭದಲ್ಲಿ ಹತ್ತರಿಂದ ನೂರು ರೂಪಾಯಿ ಮೌಲ್ಯದ ಸಾವಿರಾರು ನೋಟುಗಳು ವಿರೂಪವಾಗಿವೆ.

ಕೇವಲ ಮೂರು ತಿಂಗಳಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾಣಿಕೆ ಪೆಟ್ಟಿಗೆಯಲ್ಲಿನ ಹಣ ನಾಶವಾಗಲು ಸಾಧ್ಯವಿಲ್ಲ ಎಂಬ ಸಂದೇಹ ಉಂಟಾಗಿದ್ದು, ಯಾರಾದರೂ ಕಿಡಿಗೇಡಿಗಳು ನೀರು ಹಾಕಿ ಹಣವನ್ನು ಹಾಳು ಮಾಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಇದು ಉದ್ದೇಶ ಪೂರ್ವಕವಾಗಿ ನಡೆದಿರುವ ಕೃತ್ಯವೇ ಅಥವಾ ಯಾವುದಾದರೂ ರಾಸಾಯನಿಕ ಸಂಪರ್ಕದಿಂದ ನೋಟುಗಳು ಈ ರೀತಿಯಾಗಿವೇ ಎಂಬುದನ್ನು ದೇಗುಲದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮರಾದ ಸಹಾಯದಿಂದ ಪರಿಶೀಲಸಲಾಗುವುದು ಎಂದು ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಜೋಗದ ನಾರಾಯಣಪ್ಪ ತಿಳಿಸಿದ್ದಾರೆ.

ಇದನ್ನೂ ಓದಿ:ಮುಂದುವರೆದ ರೆಡ್ಡಿ ಟೆಂಪಲ್​ ರನ್​.. ಗಂಗಾವತಿ ದುರ್ಗಮ್ಮ ದೇವಿಗೆ ವಿಶೇಷ ಪೂಜೆ

Last Updated : Dec 22, 2022, 4:55 PM IST

ABOUT THE AUTHOR

...view details