ಕುಷ್ಟಗಿ: ಜನಾಭಿಪ್ರಾಯ ಕೇಳದೇ, ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ನಿಡಶೇಸಿ ಕೆರೆ ಅಭಿವೃಧ್ಧಿ ಸಮಿತಿ ವಿಸರ್ಜನೆ ನಡೆ ತರಾತುರಿಯ ನಿರ್ಧಾರ ಎಂಬುದು ಸಾರ್ವಜನಿಕರ ಚರ್ಚೆಗೆ ಗ್ರಾಸವಾಗಿದೆ.
ಕುಷ್ಟಗಿ: ನಿಡಶೇಸಿ ಕೆರೆ ಅಭಿವೃದ್ದಿ ಸಮಿತಿ ವಿಸರ್ಜನೆ ಆತುರದ ನಿರ್ಧಾರ - ಅಕ್ರಮ ಸಾಬೀತಾದರೆ ಸಂಬಂಧಿಸಿದವರ ಆಸ್ತಿ ಮುಟ್ಟುಗೋಲು
ಅಕ್ರಮ ಸಾಬೀತಾದರೆ ಸಂಬಂಧಿಸಿದವರ ಆಸ್ತಿ ಮುಟ್ಟುಗೋಲು ಹಾಕಲಿದೆ. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮದ ಪರಮಾಧಿಕಾರ ಸರ್ಕಾರಕ್ಕೆ ಇದೆ. ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಯಡವಟ್ಟಿಗೆ ಸಮಿತಿ ವಿಸರ್ಜನೆ ಮಾಡುತ್ತಿರುವುದು ಸರಿ ಅಲ್ಲ ಎಂದು ದಾಳಿಂಬೆ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ತಿಳಿಸಿದ್ದಾರೆ.

ಕಳೆದ ಗುರುವಾರ ಕೆರೆಯ ಅಭಿವೃಧ್ಧಿ ಸಮಿತಿ ಕೆಲವೇ ಸದಸ್ಯರು, ಹಳೆ ಪ್ರವಾಸಿ ಮಂದಿರದಲ್ಲಿ ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ಬಗ್ಗೆ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗುತ್ತಿರುವುದು, ಈ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದ್ದು ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಾರ್ವಜನಿಕರೊಂದಿಗೆ ಬೀದಿಗೆ ಇಳಿದು ಹೋರಾಟದ ಬಗ್ಗೆ ಪ್ರಸ್ತಾಪಿಸಿದೆ.
ಕೆರೆಯ ಅಭಿವೃಧ್ಧಿಯಲ್ಲಿ ಅಕ್ರಮವಾಗಿ ಹಣ ಮಂಜೂರಾತಿ ಮಾಡಿಸಿಕೊಂಡಿರುವುದು ವ್ಯಕ್ತಿ ಅಲ್ಲ ಸರಕಾರದ ಸಣ್ಣ ನೀರಾವರಿ ಇಲಾಖೆ ಅಕ್ರಮ ಕಂಡು ಬಂದಲ್ಲಿ ಇಲಾಖೆ ಕ್ರಮ ವಹಿಸಿ ತನಿಖೆ ಕೈಗೊಳ್ಳಲಿದೆ. ಅಕ್ರಮ ಸಾಬೀತಾದರೆ ಸಂಬಂಧಿಸಿದವರ ಆಸ್ತಿ ಮುಟ್ಟುಗೋಲು ಹಾಕಲಿದೆ. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮದ ಪರಮಾಧಿಕಾರ ಸರ್ಕಾರಕ್ಕೆ ಇದೆ. ಇಲ್ಲಿನ ಸಣ್ಣ ನೀರಾವರಿ ಇಲಾಖೆಯ ಯಡವಟ್ಟಿಗೆ ಸಮಿತಿ ವಿಸರ್ಜನೆ ಮಾಡುತ್ತಿರುವುದು ಸರಿ ಅಲ್ಲ ಎಂದು ದಾಳಿಂಬೆ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಅಬ್ದುಲ್ ನಯೀಮ್ ತಿಳಿಸಿದ್ದಾರೆ.