ಕರ್ನಾಟಕ

karnataka

ETV Bharat / state

ಅಂಜನಾದ್ರಿಯಲ್ಲಿ ಐಪಿಎಸ್​ ಅಧಿಕಾರಿ ರವಿ ಚನ್ನಣ್ಣನವರ್... ವಿಶೇಷ ಪೂಜೆ - ಅಂಜನಾದ್ರಿ ಬೆಟ್ಟದಲ್ಲಿ ಐಪಿಎಸ್​ ಅಧಿಕಾರಿ ರವಿ ಚನ್ನಣ್ಣನವರ್

ಗಂಗಾವತಿ ತಾಲೂಕಿನ ಇತಿಹಾಸ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಐಪಿಎಸ್​ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಭೇಟಿ ನೀಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದಾರೆ.

dcp Ravi Channannavar visits anjandri hills
ಅಂಜನಾದ್ರಿಗೆ ರವಿ ಡಿ.ಚನ್ನಣ್ಣವರ್ ಭೇಟಿ

By

Published : Oct 24, 2021, 4:42 PM IST

ಗಂಗಾವತಿ/ಕೊಪ್ಪಳ: ಪ್ರಮುಖ ಯಾತ್ರಾಸ್ಥಳ ಹಾಗೂ ಧಾರ್ಮಿಕ ಕ್ಷೇತ್ರ ಚಿಕ್ಕರಾಂಪೂರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ದಿಕ್ಸೂಚಿ ಉಪನ್ಯಾಸ ನೀಡುವ ಉದ್ದೇಶಕ್ಕೆ ಗಂಗಾವತಿಗೆ ಆಗಮಿಸಿದ್ದ ಅವರು, ಬೆಳಗ್ಗೆ ಅಂಜನಾದ್ರಿಯ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಅಂಜನಾದ್ರಿಗೆ ಐಪಿಎಸ್​ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಭೇಟಿ

ಕಂಪ್ಲಿಯಲ್ಲಿರುವ ಬಂಧುವೊಬ್ಬರ ನಿವಾಸಕ್ಕೆ ಆಗಮಿಸಿ ವಾಸ್ತವ್ಯ ಹೂಡಿದ್ದ ಐಪಿಎಸ್​ ಅಧಿಕಾರಿ ರವಿ ಚನ್ನಣ್ಣನವರ್, ಬೆಳಗ್ಗೆ ಗಂಗಾವತಿಗೆ ಆಗಮಿಸಿ ಅಂಜನಾದ್ರಿ ದರ್ಶನ ಪಡೆದರು. ಬಳಿಕ ಹಂಪಿಯ ಸ್ಮಾರಕಗಳ ವೀಕ್ಷಣೆಗೆ ತೆರಳಿದರು. ಈ ವೇಳೆ ಚನ್ನಣ್ಣವರ ಜೊತೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಯುವಕರು ಮುಗಿಬಿದ್ದರು.

ABOUT THE AUTHOR

...view details