ಕೊಪ್ಪಳ:ಡಿಸಿಎಂ ಲಕ್ಷ್ಮಣ ಸವದಿ ಅಧ್ಯಕ್ಷತೆಯಲ್ಲಿ ನಡೆದ ಐಸಿಸಿ ಸಭೆಯಲ್ಲಿ, ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ನೀರು ಹರಿಸುವ ಕುರಿತಾಗಿ ತಮ್ಮ ನಿರ್ಧಾರಗಳನ್ನು ಪ್ರಕಟಿಸಿದರು.
ಡಿಸೆಂಬರ್ನಲ್ಲಿ ತುಂಗಭದ್ರಾ ನಾಲೆಗೆ 3,400 ಕ್ಯೂಸೆಕ್ ನೀರು ಬಿಡುಗಡೆ : ಡಿಸಿಎಂ ಸವದಿ ಸ್ಪಷ್ಟನೆ - ತುಂಗಭದ್ರಾ ಎಡದಂಡೆ ನಾಲೆಗೆ 3400 ಕ್ಯೂಸೆಕ್ ಡಿಸಿಎಂ ಸವದಿ ಸ್ಪಷ್ಟನೆ
ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ನೀರು ಹರಿಸುವ ವಿಚಾರವಾಗಿ ಡಿಸಿಎಂ ಲಕ್ಷ್ಮಣ ಸವದಿ ಸಭೆ ನಡೆಸಿದ್ದು, ಡಿಸಂಬರ್ ತಿಂಗಳಿನಲ್ಲಿ ನಾಲೆ 3,400 ಕ್ಯೂಸೆಕ್ ನೀರು ಹರಿಸಲಾಗುವುದು ಎಂದು ಭರವಸೆಯೊಂದಿಗೆ ಅಧಿಕೃತವಾಗಿಯೂ ಪ್ರಕಟಿಸಿದ್ದಾರೆ.
![ಡಿಸೆಂಬರ್ನಲ್ಲಿ ತುಂಗಭದ್ರಾ ನಾಲೆಗೆ 3,400 ಕ್ಯೂಸೆಕ್ ನೀರು ಬಿಡುಗಡೆ : ಡಿಸಿಎಂ ಸವದಿ ಸ್ಪಷ್ಟನೆ](https://etvbharatimages.akamaized.net/etvbharat/prod-images/768-512-5135412-thumbnail-3x2-dguih.jpg)
ಡಿಸಿಎಂ ಮಾತನಾಡಿ, ಸಭೆಯಲ್ಲಿ ನಿರ್ಧಾರವಾದಂತೆ ಲಭ್ಯತೆಯ ಆಧಾರದ ಮೇಲೆ ನೀರು ಹರಿಸಲಾಗುವುದು. ತುಂಗಭದ್ರಾ ಎಡದಂಡೆ ಮುಖ್ಯ ನಾಲೆಗೆ ಡಿಸೆಂಬರ್ 1 ರಿಂದ 31 ರವರೆಗೆ 3,800 ಕ್ಯೂಸೆಕ್ ನಂತೆ ನೀರು ಹರಿಸಲಾಗುತ್ತದೆ. ಈ ಪೈಕಿ ಡಿಸೆಂಬರ್ 15 ರಿಂದ 27 ರವರೆಗೆ ವಡ್ಡರಹಟ್ಟಿ, ಸಿರಿವಾರ, ಸಿಂಧನೂರು ವಿಭಾಗಗಳಿಗೆ ಆನ್ ಆಫ್ ಸಿಸ್ಟಮ್ ಇರುತ್ತದೆ. ಇನ್ನು ಜನವರಿ 1 ರಿಂದ 31 ರವರೆಗೆ 3,400 ಕ್ಯೂಸೆಕ್ನಂತೆ ಹಾಗೂ ಫೆಬ್ರವರಿ 1 ರಿಂದ ಮಾರ್ಚ್ 31 ರವರೆಗೆ 3,000 ಕ್ಯೂಸೆಕ್ ನಂತೆ ನೀರು ಹರಿಸುವುದಾಗಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮಾಹಿತಿ ನೀಡಿದರು.
ಇನ್ನು ಕುಡಿವ ನೀರಿನ ಸಲುವಾಗಿ ಎಡದಂಡೆ ವಿಜಯನಗರ ನಾಲೆಗಳು ಸೇರಿದಂತೆ ಏಪ್ರಿಲ್ 10 ರಿಂದ 20 ರವರೆಗೆ 10 ದಿನಗಳ ಕಾಲ 2000 ಕ್ಯೂಸೆಕ್ ನಂತೆ ನೀರಿನ ಲಭ್ಯತೆಗೆ ಅನುಗುಣವಾಗಿ ನೀರು ಹರಿಸಲಾಗುವುದು ಎಂದರು.