ಕರ್ನಾಟಕ

karnataka

By

Published : Dec 1, 2020, 1:41 PM IST

Updated : Dec 1, 2020, 2:22 PM IST

ETV Bharat / state

ಭಾರತೀಯ ಜನತಾ ಪಾರ್ಟಿ ಒಂದು ಕುಟುಂಬವಿದ್ದಂತೆ : ಡಿಸಿಎಂ ಲಕ್ಷ್ಮಣ ಸವದಿ

ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಸ್ ಬಂದ್ ಆಗೋದಿಲ್ಲ. ಎಲ್ಲಾ ನಾಲ್ಕು ನಿಮಗದ ಬಸ್ ಸಂಚಾರವಿರುತ್ತದೆ. ಬಂದ್ ಆದರೆ ನಾವು ಸಂಚಾರ ನಿಲ್ಲಸುವುದಿಲ್ಲ. ಸರ್ಕಾರದ ಆಸ್ತಿಗೆ ಯಾರೂ ಹಾನಿ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದರೆ ಹಾನಿ ಮಾಡಿದವರಿಂದಲೇ ನಷ್ಟ ಭರಿಸಲು ಕ್ರಮ ಕೈಗೊಳ್ಳಲಾಗುತ್ತದೆ..

DCM Lakshmana Sawadi
ಡಿಸಿಎಂ ಲಕ್ಷ್ಮಣ ಸವದಿ

ಕೊಪ್ಪಳ :ಯಾರನ್ನು ಮಂತ್ರಿ ಮಾಡಬೇಕು ಅಥವಾ ಬಿಡಬೇಕೋ ಎಂಬುದು ಸಿಎಂ ಪರಮಾಧಿಕಾರ. ಅವರ ಪರಮಾಧಿಕಾರ ಬಳಸಿ ಮಂತ್ರಿಗಳನ್ನು ಮಾಡಿದ್ದಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಮಾತನಾಡಿದ ಅವರು, ಇಲ್ಲಿ ಯಾರ ಪರ ಯಾವುದೂ ಇಲ್ಲ. ಭಾರತೀಯ ಜನತಾ ಪಾರ್ಟಿ ಒಂದು ಕುಟುಂಬವಿದ್ದಂತೆ. ಹಾಲಿನಲ್ಲಿ ಸಕ್ಕರೆ ಬೆರೆತರೆ ರುಚಿ ಬರುತ್ತದೆ, ವಿಭಜನೆಯಾಗುವುದಿಲ್ಲ. ಅದರಂತೆ ನಮ್ಮಲ್ಲಿ ಹೊರಗಿನವರು, ಒಳಗಿನವರು ಅಂತಾ ಯಾರೂ ಇಲ್ಲ. ನಾವೆಲ್ಲಾ ಬಿಜೆಪಿಯವರು ಒಂದೇ ಎಂದರು.

ಡಿಸಿಎಂ ಲಕ್ಷ್ಮಣ ಸವದಿ

ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಸಿಎಂ ಲಕ್ಷ್ಮಣ ಸವದಿ, ಒಬ್ಬ ಶಾಸಕ, ಒಬ್ಬ ಮಂತ್ರಿ ಬದಲಾವಣೆ ಆಗ್ತಾರೆ ಅಂತಾ ಹೇಳಿದ್ರಾ? ಮುಖ್ಯಮಂತ್ರಿ ಬದಲಾವಣೆಯಾಗ್ತಾರೆ ಅಂತಾ ಹೇಳಿದ್ರಾ? ಎಂದು ಪ್ರಶ್ನೆ ಮಾಡಿದ ಸವದಿ, ಬಸನಗೌಡ ಪಾಟೀಲ್ ಯತ್ನಾಳ್ ಹೇಳುವುದು ಅವರ ವೈಯಕ್ತಿಕ. ಈಗಾಗಲೇ ಪಕ್ಷ ಅವರಿಗೆ ನೋಟಿಸ್ ನೀಡಿದೆ ಎಂದು ಹೇಳಿದರು.

ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬಸ್ ಬಂದ್ ಆಗೋದಿಲ್ಲ. ಎಲ್ಲಾ ನಾಲ್ಕು ನಿಮಗದ ಬಸ್ ಸಂಚಾರವಿರುತ್ತದೆ. ಬಂದ್ ಆದರೆ ನಾವು ಸಂಚಾರ ನಿಲ್ಲಸುವುದಿಲ್ಲ. ಸರ್ಕಾರದ ಆಸ್ತಿಗೆ ಯಾರೂ ಹಾನಿ ಮಾಡಬಾರದು. ಒಂದು ವೇಳೆ ಹಾಗೆ ಮಾಡಿದರೆ ಹಾನಿ ಮಾಡಿದವರಿಂದಲೇ ನಷ್ಟ ಭರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ಹೆಚ್. ವಿಶ್ವನಾಥ ಅವರಿಗೆ ಸಚಿವರಾಗಲು ಬರುವುದಿಲ್ಲ ಎಂಬ ವಿಷಯವನ್ನು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೇನೆ. ನ್ಯಾಯಾಲಯಕ್ಕೆ ವಿಶ್ವನಾಥ ಅವರು ಮೇಲ್ಮನವಿ ಸಲ್ಲಿಸಲು ಅವಕಾಶವಿದೆ. ಅವರು ಮೇಲ್ಮನವಿ ಸಲ್ಲಿಸುತ್ತಾರೆ. ಮೇಲ್ಮನವಿ ತೀರ್ಪು ಏನು ಬರುತ್ತದೆಯೋ ಅದನ್ನು ನೋಡಿಕೊಂಡು ನಾವು ತೀರ್ಮಾನ ಕೈಗೊಳ್ಳುತ್ತೇವೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಇದೇ ಸಂದರ್ಭದಲ್ಲಿ ಹೇಳಿದರು.

Last Updated : Dec 1, 2020, 2:22 PM IST

ABOUT THE AUTHOR

...view details