ಕರ್ನಾಟಕ

karnataka

ETV Bharat / state

ಗಂಗಾವತಿ: ಅಕ್ರಮ ಮರಳು ಸಾಗಾಣಿಕೆ ಸ್ಥಳಕ್ಕೆ ಡಿಸಿ ಭೇಟಿ, ಪರಿಶೀಲನೆ - DC visit to illegal sand trafficking site at Gangavathi

ಕನಕಗಿರಿ ತಾಲೂಕಿನ ಉದ್ಯಾಳ, ಹೆಬ್ಬಾಳ ಹಾಗೂ ಮುಸ್ಟೂರು ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದುಕೊಂಡು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

District Collector Vikas Kishore Suralkar
ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್

By

Published : Jan 12, 2021, 4:50 PM IST

ಗಂಗಾವತಿ:ಕನಕಗಿರಿ, ಕಾರಟಗಿ ಹಾಗೂ ತಾಲೂಕಿನ ನಾನಾ ಗ್ರಾಮಗಳಿಂದ ಸರಬರಾಜಾಗುತ್ತಿರುವ ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಹಾಗೂ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್

ಕನಕಗಿರಿ ತಾಲೂಕಿನ ಉದ್ಯಾಳ ಹಾಗೂ ಹೆಬ್ಬಾಳ, ಮುಸ್ಟೂರು ಗ್ರಾಮದಲ್ಲಿ ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಪಡೆದುಕೊಂಡು ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಮಾತನಾಡಿ, ಅಕ್ರಮ ಮರಳು ಸಾಗಾಣಿಕೆ ಅಧಿಕೃತಗೊಳಿಸುವಿಕೆಯನ್ನು ಆಯಾ ಪಂಚಾಯಿತಿಗಳಿಗೆ ವಹಿಸಲಾಗುವುದು ಎಂದರು.

ಓದಿ:ನಾಳೆ ಸಚಿವ ಸಂಪುಟ ವಿಸ್ತರಣೆ.. ಸಿಎಂ ನಿರ್ಧಾರವೇ ಅಂತಿಮ ಎಂದ ಕಟೀಲ್..

ಹೆಬ್ಬಾಳದಿಂದಲೇ ದೊಡ್ಡ ಪ್ರಮಾಣದ ಅಕ್ರಮ ಮರಳು ಸಾಗಾಣಿಕೆ ಆಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ತೆಪ್ಪಗಳ ಮೂಲಕ ನದಿಯ ಆಳಕ್ಕೆ ಇಳಿದು ಮರಳು ಸಂಗ್ರಹಿಸಿ ಒಂದು ಕಡೆ ಸ್ಟಾಕ್ ಮಾಡುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತ ಪೊಲೀಸ್ ಇಲಾಖೆಯಿಂದ ಇಂತಹ ಅಕ್ರಮ ಮರಳು ಸಾಗಾಣಿಕೆಯ ಮೇಲೆ ಕಣ್ಣಿಟ್ಟಿದ್ದು, ಅಲ್ಲಿ ಬ್ಲಾಕ್ ಮಾಡಿ ಟ್ರೆಂಚ್ ಹಾಕಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

ABOUT THE AUTHOR

...view details