ಗಂಗಾವತಿ:ನಗರಕ್ಕೆ ದಿಢೀರ್ ಭೇಟಿ ನೀಡಿದ ಕೊಪ್ಪಳ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಲ್ಕರ್, ಸುಮಾರು ಎರಡು ಗಂಟೆಗೂ ಅಧಿಕ ಕಾಲ ನಗರದಲ್ಲಿ ರೌಂಡ್ಸ್ ಹಾಕಿ ನಾನಾ ಕಾಮಗಾರಿಗಳನ್ನು ಪರಿಶೀಲಿಸಿದರು.
ಗಂಗಾವತಿಗೆ ದಿಢೀರ್ ಭೇಟಿ ನೀಡಿದ ಡಿಸಿ: ಸಿಟಿ ರೌಂಡ್ಸ್ - DC City Rounds
ಗಂಗಾವತಿಗೆ ಇಂದು ದಿಢೀರ್ ಭೇಟಿ ನೀಡಿದ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಲ್ಕರ್ ಅವರು, ನಗರದ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
![ಗಂಗಾವತಿಗೆ ದಿಢೀರ್ ಭೇಟಿ ನೀಡಿದ ಡಿಸಿ: ಸಿಟಿ ರೌಂಡ್ಸ್ ಗಂಗಾವತಿಗೆ ದಿಢೀರ್ ಭೇಟಿ ನೀಡಿದ ಡಿಸಿ](https://etvbharatimages.akamaized.net/etvbharat/prod-images/768-512-8333421-626-8333421-1596807809525.jpg)
ಗಂಗಾವತಿಗೆ ದಿಢೀರ್ ಭೇಟಿ ನೀಡಿದ ಡಿಸಿ
ಗಂಗಾವತಿಗೆ ದಿಢೀರ್ ಭೇಟಿ ನೀಡಿದ ಡಿಸಿ
ಕೇಂದ್ರ ಸರ್ಕಾರದ ಅಮೃತ ಸಿಟಿ ಯೋಜನೆ, ರಾಜ್ಯದ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ), ನಗರೋತ್ಥಾನ ಯೋಜನೆಯಲ್ಲಿನ ಎರಡು ಮತ್ತು ಮೂರನೇ ಹಂತದ ಕಾಮಗಾರಿಗಳನ್ನು ಜಿಲ್ಲಾಧಿಕಾರಿ ಪರಿಶೀಲಿಸಿದರು.
ನಗರೋತ್ಥಾನ ಯೋಜನೆಯಲ್ಲಿ ನಗರದಲ್ಲಿ ಒಟ್ಟು 6.65 ಕೋಟಿ ರೂ. ಮೊತ್ತದಲ್ಲಿ, ಅಮೃತ ನಗರ ಯೋಜನೆಯಡಿ ನಗರದ ವಿವಿಧ ವಾರ್ಡ್ಗಳಲ್ಲಿ ಕೈಗೊಳ್ಳಲಾಗಿದ್ದ ಒಟ್ಟು 7.61 ಕೋಟಿ ರೂಪಾಯಿ ಮೊತ್ತದಲ್ಲಿನ ಕಾಮಗಾರಿ ಪರಿಶೀಲಿಸಿದರು. ಕೆಕೆಆರ್ಡಿಬಿಯಲ್ಲಿ ಕೈಗೊಂಡಿದ್ದ ಒಟ್ಟು 4.05 ಕೋಟಿ ಮೊತ್ತದ ಕಾಮಗಾರಿಗಳನ್ನು ಪರಿಶೀಲಿಸಿದರು.