ಕರ್ನಾಟಕ

karnataka

ETV Bharat / state

ಆನೆಗೊಂದಿ ಉತ್ಸವ ಪಾರಂಪರಿಕ ನಡಿಗೆಗೆ ಜಿಲ್ಲಾಧಿಕಾರಿ ಚಾಲನೆ - ಆನೆಗೊಂದಿ ಉತ್ಸವ ಪಾರಂಪರಿಕ ನಡಿಗೆ

ಆನೆಗೊಂದಿ ಉತ್ಸವದ ಭಾಗವಾಗಿ ಇಂದು ಅಂಜನಾದ್ರಿ ಬೆಟ್ಟದಿಂದ ಆನೆಗೊಂದಿವರೆಗೆ ಹಮ್ಮಿಕೊಳ್ಳಲಾಗಿದ್ದ ಪಾರಂಪರಿಕ ನಡಿಗೆಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್​ ಹಾಗೂ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ಆನೆಗೊಂದಿ ಉತ್ಸವ ಪಾರಂಪರಿಕ ನಡಿಗೆ
ಆನೆಗೊಂದಿ ಉತ್ಸವ ಪಾರಂಪರಿಕ ನಡಿಗೆ

By

Published : Jan 5, 2020, 12:55 PM IST

ಗಂಗಾವತಿ: ಆನೆಗೊಂದಿ ಉತ್ಸವದ ಭಾಗವಾಗಿ ಇಂದು ಅಂಜನಾದ್ರಿ ಬೆಟ್ಟದಿಂದ ಆನೆಗೊಂದಿವರೆಗೆ ಹಮ್ಮಿಕೊಳ್ಳಲಾಗಿದ್ದ ಪಾರಂಪರಿಕ ನಡಿಗೆಗೆ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್​ ಹಾಗೂ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.

ಆನೆಗೊಂದಿ ಉತ್ಸವ ಪಾರಂಪರಿಕ ನಡಿಗೆ

ಬಳ್ಳಾರಿಯ ನೋಪಾಸನ ಸಂಸ್ಥೆ ಆಯೋಜಿಸಿದ್ದ ಪಾರಂಪರಿಕ ನಡಿಗೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಣಾಪುರ, ಆನೆಗೊಂದಿ, ಮಲ್ಲಾಪುರ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು, ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. ಅಂಜನಾದ್ರಿ ಬೆಟ್ಟದಿಂದ ಆರಂಭಿಸಲಾದ ನಡಿಗೆ, ಪಂಪಾಸರೋವರ, ಗವಿರಂಗನಾಥ ದೇಗುಲ, ದುರ್ಗಾ ದೇವಸ್ಥಾನ, ಅಗಸಿ, ರಂಗನಾಥ ದೇಗುಲ, ಗಗನ ಮಹಲ್, ಜೈನ ಬಸಿದಿ, ಚಿಂತಾಮಣಿ, ತುಂಗಭದ್ರಾ ನದಿ ದಂಡೆ ಮೂಲಕ ಸಾಗಿ ವೇದಿಕೆಯ ಮುಂಭಾಗದಲ್ಲಿ ಸಮಾರೋಪ ಮಾಡಲಾಯಿತು. ಒಟ್ಟು ಐದು ಕಿ.ಮೀ ನಡಿಗೆ ಆಯೋಜಿಸಲಾಗಿತ್ತು.

ABOUT THE AUTHOR

...view details