ಕರ್ನಾಟಕ

karnataka

ETV Bharat / state

ಮರ್ಲಾನಹಳ್ಳಿ ಗ್ರಾ.ಪಂಚಾಯಿತಿಗೆ ಅತ್ತೆ ಬಳಿಕ ಸೊಸೆಯ ಪ್ರವೇಶ - Gangavathi latest update news

ಕಾರಟಗಿ ತಾಲ್ಲೂಕಿನ ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿಗೆ ಅತ್ತೆ ಅಧಿಕಾರದ ನಡೆಸಿದ ಬೆನ್ನಲ್ಲೇ ಇದೀಗ ಸೊಸೆ ಎಂಟ್ರಿ ಕೊಟ್ಟಿದ್ದಾರೆ.

Gangavathi
ದೀಪಾ ಕುಮಾರ ರಾಠೋಡ ಮತ್ತು ಪೋಲಮ್ಮ ತಾರ ರಾಠೋಡ

By

Published : Dec 31, 2020, 5:50 PM IST

ಗಂಗಾವತಿ: ಕಾರಟಗಿ ತಾಲ್ಲೂಕಿನ ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿಗೆ ಅತ್ತೆ ಅಧಿಕಾರ ನಡೆಸಿದ ಬೆನ್ನಲ್ಲೇ ಇದೀಗ ಸೊಸೆ ಎಂಟ್ರಿ ಕೊಟ್ಟಿದ್ದಾರೆ.

ಮರ್ಲಾನಹಳ್ಳಿ ಗ್ರಾಮ ಪಂಚಾಯಿತಿ

ಗ್ರಾಮ ಪಂಚಾಯಿತಿಯ 4ನೇ ವಾರ್ಡ್​ನ ರವಿ ನಗರದಿಂದ ಸ್ಪರ್ಧಿಸಿದ್ದ ದೀಪಾ ಕುಮಾರ ರಾಠೋಡ ಅವರು 205 ಮತಗಳನ್ನು ಪಡೆದು ಪ್ರತಿಸ್ಪರ್ಧಿ ನಾಗೇಶ ಕರಿಯಪ್ಪ ವಿರುದ್ಧ (131) ಜಯಗಳಿಸಿದ್ದಾರೆ.

ಇದೇ ಕ್ಷೇತ್ರದಿಂದ ಇವರ ಅತ್ತೆ ಪೋಲಮ್ಮ ತಾರ ರಾಠೋಡ ಸತತ ಎರಡು ಬಾರಿಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಕಳೆದ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿದ್ದರು.

ಇದೀಗ ಅತ್ತೆ ಚುನಾವಣಾ ರಂಗದಿಂದ ನಿವೃತ್ತಿ ಪಡೆದ ಬಳಿಕ ಸೊಸೆ ಪಂಚಾಯಿತಿ ಅಖಾಡಕ್ಕೆ ಇಳಿದಿದ್ದಾರೆ.

ABOUT THE AUTHOR

...view details