ಗಂಗಾವತಿ: ಇಲ್ಲಿನ ಅಂಬೇಡ್ಕರ್ ನಗರದಲ್ಲಿ ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗಿರುವ ಗಣೇಶನ ಮೂರ್ತಿ ಇದೀಗ ವಿವಾದ ಸ್ವರೂಪ ಪಡೆದುಕೊಂಡಿದೆ. ಇದೇ ವಿಷಯವಾಗಿ ಗುರುವಾರ ದಲಿತ ಪರ ಸಂಘಟನೆಯ ಮುಖಂಡರು ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಅಂಬೇಡ್ಕರ್ ರೂಪದ ಗಣೇಶ ಮೂರ್ತಿಗೆ ದಲಿತ ಸಂಘಟನೆಗಳ ವಿರೋಧ - ಗಣೇಶನ ಮೂರ್ತಿ ಇದೀಗ ವಿವಾದ ಸ್ವರೂಪ
ಗಂಗಾವತಿಯ ಅಂಬೇಡ್ಕರ್ ನಗರದಲ್ಲಿ ಪ್ರತಿಷ್ಠಾಪನೆ ಮಾಡಿರುವ ಅಂಬೇಡ್ಕರ್ ರೂಪದ ಗಣೇಶ ಮೂರ್ತಿಗೆ ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ.
ಅಂಬೇಡ್ಕರ್ ರೂಪದ ಗಣೇಶ ಮೂರ್ತಿಗೆ ದಲಿತ ಸಂಘಟನೆಗಳ ವಿರೋಧ
ಗಣೇಶನ ಮೂರ್ತಿಯು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತಾಗಿದ್ದು, ಕೂಡಲೇ ಮೂರ್ತಿಯನ್ನು ತೆರವು ಮಾಡಬೇಕು. ಸಂಬಂಧಿತರ ಮೇಲೆ ದೂರು ದಾಖಲಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.
ಇದನ್ನೂ ಓದಿ:ಸಿಎಂಗೆ ಒಳ್ಳೆಯ ಬುದ್ಧಿ ಕರುಣಿಸಪ್ಪಾ.. ಗಣೇಶನ ಮುಂದೆ ನೋವು ತೋಡಿಕೊಂಡ ಸರಪಂಚ್