ಗಂಗಾವತಿ: ರೈತರಿಂದ ಸಂಗ್ರಹಿಸಿದ ಹಾಲು ಖರೀದಿಸಲು ಖಾಸಗಿ ಹಾಲಿನ ಡೈರಿಯೊಂದು ಹಿಂದೇಟು ಹಾಕಿದ್ದರಿಂದ ಯುವಕನೊಬ್ಬ ಹಾಲನ್ನು ಬಡವರಿಗೆ ನೀಡಿ ಮಾನವೀಯತೆ ಮೆರೆದಿದ್ದಾನೆ.
ಹಾಲಿನಂಥ ಮನಸ್ಸುಇವನದು... 40 ಲೀಟರ್ ಹಾಲನ್ನು ಬಡವರಿಗೆ ಹಂಚಿದ ಯುವಕ! - ಕೊಪ್ಪಳದಲ್ಲಿ ಕೊರೊನಾ ಎಫೆಕ್ಟ್
ರೈತರಿಂದ ಸಂಗ್ರಹಿಸಿದ ಹಾಲು ಖರೀದಿಸಲು ಖಾಸಗಿ ಹಾಲಿನ ಡೈರಿಯೊಂದು ಹಿಂದೇಟು ಹಾಕಿದ ಪರಿಣಾಮ, ಯುವಕನೊಬ್ಬ ಹಾಲನ್ನು ಬಡವರಿಗೆ ನೀಡಿ ಮಾನವೀಯತೆ ಮೆರೆದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಯುವಕನಿಂದ ಹಾಲು ಹಂಚಿಕೆ
ಕೇಸರಹಟ್ಟಿ ಗ್ರಾಮದ ಬಸವರೆಡ್ಡಿ ಎಂಬಾತ ಸಂಗ್ರಹಿಸಿದ ಸುಮಾರು 40 ಲೀಟರ್ ಹಾಲನ್ನು ನಗರದ 13ನೇ ವಾರ್ಡಿನ ಬಡವರಿಗೆ ಉಚಿತವಾಗಿ ಹಂಚಿದ್ದಾರೆ. ಖಾಸಗಿ ಡೈರಿಯ ವಂಚನೆ ಬಯಲಿಗೆ ಎಳೆದಿದ್ದಕ್ಕೆ ಕಳೆದ ಎರಡು ದಿನಗಳಿಂದ ಡೈರಿಯ ಸಿಬ್ಬಂದಿ ಹಾಲು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ರೈತರಿಗೆ ಅನ್ಯಾಯವಾಗಬಾರದು ಮತ್ತು ಹಾಲು ವ್ಯರ್ಥವಾಗಬಾರದು ಎಂಬ ಕಾರಣಕ್ಕೆ ಬಡವರಿಗೆ ಹಂಚಲಾಗಿದೆ ಎಂದು ಯುವಕ ಬಸವರೆಡ್ಡಿ ಹೇಳಿದ್ದಾರೆ.