ಕುಷ್ಟಗಿ(ಕೊಪ್ಪಳ):ತಾಲೂಕಿನ ಕೇಸೂರು ಗ್ರಾಮದ ರೋಗಿ -2254ಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆ 65 ಮನೆಗಳನ್ನ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ ತಾಲೂಕಾಡಳಿತ ಸೇರಿಸಿದೆ.
ಕೇಸೂರು ಗ್ರಾಮದಲ್ಲಿ 28 ದಿನಗಳ ಕಾಲ ಪ್ರತಿದಿನ ಆರೋಗ್ಯ ಸರ್ವೇ - koppal district kustagi taluk
ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದಲ್ಲಿ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆ 28 ದಿನಗಳವರೆಗೂ ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ಸರ್ವೇ ಮಾಡುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ.
ಅಲ್ಲದೆ 28 ದಿನಗಳವರೆಗೂ ಪ್ರತಿ ಮನೆಗೂ ಭೇಟಿ ನೀಡಿ ಆರೋಗ್ಯ ಸರ್ವೇ ಮಾಡುವಂತೆ ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಗಿದೆ. ನಾಲ್ಕು ಜನ ಆಶಾಕಾರ್ಯಕರ್ತೆಯರು, ಪ್ರತ್ಯೇಕ ಎರಡು ತಂಡಗಳಲ್ಲಿ ಸಂಚರಿಸಿ ಪ್ರತಿ ಮನೆಯವರ ಕೆಮ್ಮು, ಜ್ವರ, ನೆಗಡಿ, ಊಸಿರಾಟದ ತೊಂದರೆ, ಬಿಪಿ-ಶುಗರ್ ಬಗ್ಗೆ ವಿಚಾರಿಸಲಿದ್ದಾರೆ. ಕೇಸೂರು ಗ್ರಾಮದಲ್ಲೇ ತಾತ್ಕಾಲಿಕ ಕ್ಲಿನಿಕ್ ಆರಂಭಿಸಿದ್ದು, ಗಂಟಲು ದ್ರವ ಪರೀಕ್ಷೆಗೆ ಮಾತ್ರ ದೋಟಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕೇಸೂರು ಗ್ರಾಮದಲ್ಲಿ 28 ದಿನಗಳವರೆಗೆ ಪ್ರತಿದಿನ ಹಾಗೂ ದೋಟಿಹಾಳ ಗ್ರಾಮದಲ್ಲಿ ವಾರದಲ್ಲಿ ಎರಡು ದಿನ ಭೇಟಿ ನೀಡಿ ಆರೋಗ್ಯ ವಿಚಾರಿಸಿದ ವರದಿಯನ್ನ ಅಧಿಕಾರಿಗಳು ಪರಿಶೀಲಿಸಲಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.