ಕರ್ನಾಟಕ

karnataka

ETV Bharat / state

ಕರ್ಫೂ ಹಿನ್ನೆಲೆ ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದ ಸ್ವಚ್ಛತೆ - gangavathi bus stop

ಭಾನುವಾರ ಕರ್ಫೂ ಜಾರಿ ಮಾಡಿದ ಬೆನ್ನಲ್ಲೆ ಗಂಗಾವತಿಯ ಕೇಂದ್ರ ಬಸ್​​ ನಿಲ್ದಾಣವನ್ನು ಸಾರಿಗೆ ಇಲಾಖೆ ಸಿಬ್ಬಂದಿ ಸ್ವಚ್ಛಗೊಳಿಸಿದ್ರು.

ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದ ಸ್ವಚ್ಛತೆ
ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದ ಸ್ವಚ್ಛತೆ

By

Published : May 24, 2020, 11:16 PM IST

ಗಂಗಾವತಿ:ಭಾನುವಾರ ಇಡೀ ರಾಜ್ಯದಾದ್ಯಂತ ಸರ್ಕಾರ ಕರ್ಫೂ ಜಾರಿ ಮಾಡಿದ ಹಿನ್ನೆಲೆ, ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿ ಸ್ವಚ್ಛತಾ ಕಾರ್ಯ ಕೈಗೊಂಡರು.

ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದ ಸ್ವಚ್ಛತೆ

ಅಗ್ನಿ ಶಾಮಕ ದಳದ ಸಿಬ್ಬಂದಿ ನೆರವಿನಿಂದ ಬಸ್ ನಿಲ್ದಾಣದ ಮೇಲ್ಛಾವಣಿಗೆ ವಾಟರ್​​ಗನ್ ಮೂಲಕ ನೀರು ಹಾಯಿಸಿ ಧೂಳು, ಕಸ, ಕಡ್ಡಿ ಹಾಗೂ ಕಟ್ಟಿದ ಜೇಡರಬಲೆಯನ್ನು ತೆಗೆಯಲಾಯಿತು. ನಿಲ್ದಾಣದ ನೆಲಮಟ್ಟದಿಂದ ಮೇಲ್ಛಾವಣಿ ಸುಮಾರು 40 ಅಡಿ ಎತ್ತರದಲ್ಲಿದೆ.

ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದ ಸ್ವಚ್ಛತೆ

ಹೀಗಾಗಿ ಸುಲಭವಾಗಿ ಸಿಬ್ಬಂದಿ ಅಲ್ಲಿಗೆ ತಲುಪಲಾಗದಿದ್ದರಿಂದ ಹಾಗೂ ಮೇಲ್ಛಾವಣಿ ಸ್ವಚ್ಛತೆಗೆ ಸಿಬ್ಬಂದಿಯಿಂದ ಸಾಧ್ಯವಾಗದ್ದರಿಂದ ಪ್ರತಿಬಾರಿ ಸ್ವಚ್ಛತೆಗೆ ಅಗ್ನಿಶಾಮಕ ದಳ ಸಿಬ್ಬಂದಿಯನ್ನು ಕರೆಸಬೇಕಾಗಿರುವುದು ಅನಿವಾರ್ಯವಾಗಿದೆ. ಇಂದು ಕರ್ಫೂವಿದ್ದ ಕಾರಣ ಈ ದಿನವನ್ನು ವ್ಯರ್ಥ ಮಾಡಬಾರದೆಂದು ಸಿಬ್ಬಂದಿ ಬಸ್​ ನಿಲ್ದಾಣವನ್ನು ಸ್ವಚ್ಛಗೊಳಿಸಿದರು.

ಗಂಗಾವತಿಯ ಕೇಂದ್ರ ಬಸ್ ನಿಲ್ದಾಣದ ಸ್ವಚ್ಛತೆ

ABOUT THE AUTHOR

...view details