ಗಂಗಾವತಿ :ತಾಲೂಕಿನ ಕಡೇಬಾಗಿಲು ಗ್ರಾಮದ ಬಳಿ ಹರಿಯವ ತುಂಗಭದ್ರಾ ನದಿಯ ದಡದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆಯಾಗಿದೆ. ಹರಿಗೋಲು ಮೂಲಕ ಮೀನು ಹಿಡಿಯಲು ತೆರಳಿದ್ದ ಯುವಕರ ಕಣ್ಣಿಗೆ ಬಿದ್ದಿದೆ. ಸುಮಾರು ಎಂಟರಿಂದ ಹತ್ತು ಅಡಿಯಷ್ಟು ಉದ್ದ ಇರುವ ಈ ಬೃಹತ್ ಮೊಸಳೆ, ದಡಕ್ಕೆ ಬಂದು ಬಿಸಿಲಿಗೆ ಮೈಯೊಡ್ಡಿ ವಿಶ್ರಾಂತಿ ಪಡೆಯುವ ಭಂಗಿಯಲ್ಲಿದೆ. ಮೀನು ಹಿಡಿಯಲು ಹೋಗಿದ್ದ ಯುವಕರು ಇದನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ.
ಕಡೇಬಾಗಿಲು ಗ್ರಾಮದ ಬಳಿ ಹರಿಯವ ತುಂಗಭದ್ರಾ ನದಿ ದಡದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಅಪಾಯ ಎದುರಾಗುವ ಮುನ್ನವೇ, ಅಂದರೆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ..
ತುಂಗಭದ್ರಾ ನದಿ ದಡದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ
ನಿತ್ಯವೂ ಗ್ರಾಮದ ಜನರು ಸ್ನಾನ, ಜಾನುವಾರುಗಳನ್ನು ತೊಳೆಯಲು ಅಥವಾ ಮಹಿಳೆಯರು ಬಟ್ಟೆ ತೊಳೆಯಲು ಸಮೀಪದ ನದಿಯ ಬಳಿ ಹೋಗುತ್ತಾರೆ. ಆದ್ರೆ, ಜನವಸತಿ ಪ್ರದೇಶದ ಸಮೀಪವೇ ಮೊಸಳೆ ಕಂಡು ಬಂದಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇದೆ. ಅಪಾಯ ಎದುರಾಗುವ ಮುನ್ನವೇ, ಅಂದರೆ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸೂಕ್ತ ನಿಗಾವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಬಸ್ ಓಡಿಸೋಕೆ ಬಿಎಂಟಿಸಿ ಸಕಲ ಸಿದ್ಧತೆ: ಡಿಪೋಗಳಲ್ಲಿ ಬಸ್ ಸ್ವಚ್ಛತಾ ಕಾರ್ಯ ಆರಂಭ