ಕರ್ನಾಟಕ

karnataka

ETV Bharat / state

ಗ್ರಾ.ಪಂ ಚುನಾವಣೆಗೆ ಕೋವಿಡ್​ ಟೆಸ್ಟ್ ಕಡ್ಡಾಯ: ಆಸ್ಪತ್ರೆಗೆ ಸ್ಪರ್ಧಾಕಾಂಕ್ಷಿಗಳ ದೌಡು

ಗ್ರಾ.ಪಂ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಕೆಗೂ ಮುನ್ನ ಕೋವಿಡ್​ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿದೆ. ಕುಷ್ಟಗಿಯಲ್ಲಿ ಸ್ಪರ್ಧಾಕಾಂಕ್ಷಿಗಳು ಟೆಸ್ಟ್ ಮಾಡಿಸಲು ಆಸ್ಪತ್ರೆಗಳಲ್ಲಿ ಮುಗಿಬಿದ್ದಿದ್ದಾರೆ.

Village Panchayat election-2020
ಕೋವಿಡ್ ಟೆಸ್ಟ್​ಗೆ ಮುಗಿಬಿದ್ದ ಗ್ರಾ.ಪಂ ಸ್ಪರ್ಧಾಕ್ಷಿಂಗಳು

By

Published : Dec 11, 2020, 4:26 PM IST

ಕುಷ್ಟಗಿ (ಕೊಪ್ಪಳ) :ಗ್ರಾ.ಪಂ ಚುನಾವಣೆಯ ಸ್ಪರ್ಧಿಗಳು ಮತ್ತು ಸೂಚಕರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಹಿನ್ನೆಲೆಯಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಪರ್ಧಾಕಾಂಕ್ಷಿಗಳು ಕೋವಿಡ್​ ಟೆಸ್ಟ್​ಗೆ ಮಾಡಿಸಿಕೊಳ್ಳಲು ಮುಗಿಬಿದ್ದದ್ದು ಕಂಡುಬಂತು.

ಆಸ್ಪತ್ರೆಗಳಲ್ಲಿ ಒಪಿಡಿ ಚೀಟಿಯೊಂದಿಗೆ ಮೊಬೈಲ್​ನಲ್ಲಿ ಆನ್​ಲೈನ್​ ನೋಂದಣಿ ಮಾಡಿ, ಒಟಿಪಿ ಪಡೆದು ವಿಳಾಸದ ವಿವರ ದಾಖಲಿಸಿದ ನಂತರ ಕೋವಿಡ್ ಟೆಸ್ಟ್​ಗೆ ಸರದಿಯಲ್ಲಿ ನಿಂತು ಕಾಯಬೇಕಿದೆ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ದಾಖಲೆ ಮಾಡಿಸಿಕೊಳ್ಳಲು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ.

ಕೋವಿಡ್ ಟೆಸ್ಟ್​ಗೆ ಮುಗಿಬಿದ್ದ ಗ್ರಾ.ಪಂ ಸ್ಪರ್ಧಾಕಾಂಕ್ಷಿಗಳು

ಓದಿ : ಕೊಪ್ಪಳ: ಬಸ್ ನಿಲ್ದಾಣದಲ್ಲೇ ಅಡುಗೆ ಮಾಡಿ ಊಟ ಮಾಡಿದ ಸಾರಿಗೆ ಸಿಬ್ಬಂದಿ

ಕೋವಿಡ್ ಟೆಸ್ಟ್​ಗೆ ಎರಡ್ಮೂರು ದಿನ ಹಿಡಿಯುತ್ತಿದೆ. ಇತರೆ ದಾಖಲಾತಿ ಹೊಂದಿಸಿಕೊಳ್ಳುತ್ತಾ, ಅಲ್ಲಿ ಇಲ್ಲಿ ಅಲೆದಾಡಿದರೆ ಮತದಾರರನ್ನು ಭೇಟಿ ಮಾಡುವುದಕ್ಕೆ ಸಮಯ ಸಿಗುವುದಿಲ್ಲ ಎಂದು ಕಂದಕೂರು ಗ್ರಾಮದ ಮಾರುತಿ ಹಲಗಿ ಹೇಳಿದ್ದಾರೆ.

ಈ ಕುರಿತು ತಹಶೀಲ್ದಾರ್​ ಎಂ.ಸಿದ್ದೇಶ್​ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ನಿರ್ದೇಶನ ಪ್ರಕಾರ ಕೋವಿಡ್ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿದೆ. ತಾಲೂಕಿನಲ್ಲಿ 11 ಪ್ರಾಥಮಿಕ ಕೇಂದ್ರಗಳಿವೆ, ಇದರ ಜೊತೆಗೆ ತಾಲೂಕು ಆಸ್ಪತ್ರೆಯಲ್ಲೂ ಟೆಸ್ಟ್ ಮಾಡಿಸಿಕೊಳ್ಳಬಹುದಾಗಿದೆ ಎಂದಿದ್ದಾರೆ.

ABOUT THE AUTHOR

...view details