ಕರ್ನಾಟಕ

karnataka

ETV Bharat / state

ಗಂಗಾವತಿ ಉಪವಿಭಾಗ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸಾ ಕೇಂದ್ರ ಪ್ರಾರಂಭ - ಕೋವಿಡ್ ಚಿಕಿತ್ಸಾ ಆಸ್ಪತ್ರೆ

ಕೊಪ್ಪಳ ಜನತೆಗೆ ಸೀಮಿತವಾಗಿದ್ದ ಕೋವಿಡ್ ಚಿಕಿತ್ಸಾ ಆಸ್ಪತ್ರೆಯ ಮತ್ತೊಂದು ವಿಭಾಗವನ್ನು ಗಂಗಾವತಿಯ ಉಪವಿಭಾಗ ಆಸ್ಪತ್ರೆಯಲ್ಲಿ ತಕ್ಷಣದಿಂದ ಆರಂಭಿಸಲು ಜಿಲ್ಲಾಡಳಿತ ತೀರ್ಮಾನ ಮಾಡಿದೆ.

ಕೋವಿಡ್ ಚಿಕಿತ್ಸಾ ಕೇಂದ್ರ
ಕೋವಿಡ್ ಚಿಕಿತ್ಸಾ ಕೇಂದ್ರ

By

Published : Jul 29, 2020, 8:59 AM IST

ಗಂಗಾವತಿ: ಕೊಪ್ಪಳ ಜನತೆಗೆ ಸೀಮಿತವಾಗಿದ್ದ ಕೋವಿಡ್ ಚಿಕಿತ್ಸಾ ಆಸ್ಪತ್ರೆಯ ಮತ್ತೊಂದು ವಿಭಾಗವನ್ನು ಗಂಗಾವತಿಯ ಉಪವಿಭಾಗ ಆಸ್ಪತ್ರೆಯಲ್ಲಿ ತಕ್ಷಣದಿಂದ ಆರಂಭಿಸಲು ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದೆ.

ಕೊರೊನಾ ಸೋಂಕು ಪೀಡಿತ ವ್ಯಕ್ತಿಗಳಿಗೆ ಇದುವರೆಗೂ ಕೊಪ್ಪಳದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಗಂಗಾವತಿ ನಗರ ಸೇರದಂತೆ ಗ್ರಾಮೀಣ ಭಾಗದಲ್ಲಿ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ವ್ಯವಸ್ಥೆಗೆ ಮುಂದಾಗಿದೆ.

ಕೋವಿಡ್ ಚಿಕಿತ್ಸಾ ಕೇಂದ್ರ

ಈಗಾಗಲೇ ಉಪವಿಭಾಗ ಆಸ್ಪತ್ರೆಯ ಅರ್ಧ ಕಟ್ಟಡವನ್ನು ವಿಭಜಿಸಲಾಗಿದ್ದು, ನೂರು ಹಾಸಿಗೆಗಳ ಪೈಕಿ 50 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿದೆ. ಸೋಂಕಿತರು ಪತ್ತೆಯಾದಂತೆ ಇಲ್ಲಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ABOUT THE AUTHOR

...view details