ಕರ್ನಾಟಕ

karnataka

ETV Bharat / state

ಕೊರೊನಾ ಎಫೆಕ್ಟ್.. ಟನ್‌ಗಟ್ಟಲೇ ತರಕಾರಿ ಗಂಗಾವತಿಯಲ್ಲಿ ತಿಪ್ಪೆಗುಂಡಿ ಪಾಲು.. - ಖರೀದಿಸಲು ಗ್ರಾಹಕರಿಗೆ ಅವಕಾಶವಿಲ್ಲದ ಕಾರಣ

ನಗರಸಭೆಯ ವಾಹನಗಳು ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸುತ್ತಿವೆ. ಮಾರುಕಟ್ಟೆಗಳಲ್ಲಿ ಕೊಳ್ಳುವ ಗ್ರಾಹಕರಿಲ್ಲದೇ ಅಪಾರ ಪ್ರಮಾಣದ ಗಡ್ಡೆಗೆಣಸು, ಸೊಪ್ಪು ಮೊದಲಾದ ತರಕಾರಿ ತಿಪ್ಪೆ ಸೇರುತ್ತಿದೆ.

covid-19-effect-tan-of-vegetables-waste-in-gangavati
ಕೊರೊನಾ ಎಫೆಕ್ಟ್: ಟನ್‌ ಗಟ್ಟಲೇ ತರಕಾರಿ ಗಂಗಾವತಿಯಲ್ಲಿ ತಿಪ್ಪೆಗುಂಡಿ ಪಾಲು

By

Published : Apr 11, 2020, 5:52 PM IST

ಗಂಗಾವತಿ :ಕೊರೊನಾದಿಂದ ರಾಜ್ಯದಲ್ಲಿ ಲಾಕ್‌ಡೌನ್ ಆದೇಶ ಜಾರಿಯಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಖರೀದಿಸಲು ಗ್ರಾಹಕರಿಗೆ ಅವಕಾಶವಿಲ್ಲದ ಕಾರಣ ಟನ್‌ಗಟ್ಟಲೇ ತರಕಾರಿ ತಿಪ್ಪೆಗುಂಡಿ ಸೇರುತ್ತಿರುವುದು ಬೆಳಕಿಗೆ ಬಂದಿದೆ.

ನಗರಸಭೆಯ ವಾಹನಗಳು ಮನೆ ಬಾಗಿಲಿಗೆ ಹೋಗಿ ಕಸ ಸಂಗ್ರಹಿಸುತ್ತಿವೆ. ಮಾರುಕಟ್ಟೆಗಳಲ್ಲಿ ಕೊಳ್ಳುವ ಗ್ರಾಹಕರಿಲ್ಲದೇ ಅಪಾರ ಪ್ರಮಾಣದ ಗಡ್ಡೆಗೆಣಸು, ಸೊಪ್ಪು ಮೊದಲಾದ ತರಕಾರಿ ತಿಪ್ಪೆ ಸೇರುತ್ತಿದೆ.

ಅಲ್ಲದೇ ನಗರಸಭೆಯ ಅಧಿಕಾರಿಗಳು ಇತ್ತೀಚೆಗೆ ಡೈಲಿ ಮಾರುಕಟ್ಟೆಯಲ್ಲಿನ ಮಳಿಗೆಗಳನ್ನು ನೆಲಸಮ ಮಾಡಿದ ಬಳಿಕ ಅಲ್ಲಿನ ವರ್ತಕರು ತಮ್ಮ ಬಳಿ ಇದ್ದ ತರಕಾರಿಯನ್ನು ಮಾರಾಟ ಮಾಡಲು ಸಾಧ್ಯವಾಗದೇ ತಿಪ್ಪೆಗೆ ಎಸೆಯುತ್ತಿರುವ ಪ್ರಕರಣ ಹೆಚ್ಚಾಗಿದೆ.

ABOUT THE AUTHOR

...view details