ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಎರಡು ಚಿರತೆಗಳು ಪ್ರತ್ಯಕ್ಷ.. ಮಿಲನ ಮಹೋತ್ಸವಕ್ಕಾಗಿ ಜೋಡಿ ಬಯಲಿಗೆ - ಬಸವನದುರ್ಗಾ ಕಡೆಬಾಗಿಲು

ಗಂಗಾವತಿ ತಾಲೂಕಿನ ಬಸವನದುರ್ಗಾ ಗೂಗಿಬಂಡೆ ಪ್ರದೇಶದಲ್ಲಿ ಜೋಡಿ ಚಿರತೆಗಳು ಪ್ರತ್ಯಕ್ಷವಾಗಿವೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಗಂಗಾವತಿಯಲ್ಲಿ ಚಿರತೆ ಪತ್ತೆ
ಗಂಗಾವತಿಯಲ್ಲಿ ಚಿರತೆ ಪತ್ತೆ

By

Published : Oct 6, 2022, 6:50 PM IST

Updated : Oct 6, 2022, 8:56 PM IST

ಗಂಗಾವತಿ: ಬುಧವಾರವಷ್ಟೇ ಬಸವನದುರ್ಗಾ ಕಡೆಬಾಗಿಲು ಬಳಿ ಕಂಡು ಬಂದಿದ್ದ ಜೋಡಿ ಚಿರತೆಗಳು ಗುರುವಾರ ಮತ್ತೆ ತಾಲೂಕಿನ ಬಸವನದುರ್ಗಾ ಗೂಗಿಬಂಡೆ ಪ್ರದೇಶದಲ್ಲಿ ಪ್ರತ್ಯಕ್ಷವಾಗಿದ್ದು, ಜನರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಇವು ನಿನ್ನೆ(ಬುಧವಾರ) ಕಂಡಿದ್ದ ಚಿರತೆಗಳಾ ಅಥವಾ ಬೇರೆ ಚಿರತೆಗಳೆ? ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ. ಕಳೆದ ಒಂದು ವಾರದಿಂದ ನಿರಂತರ ಈ ಭಾಗದಲ್ಲಿ ಚಿರತೆಗಳು ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಗಂಗಾವತಿಯಲ್ಲಿ ಜೋಡಿ ಚಿರತೆ ಪತ್ತೆ

ಸಾರ್ವಜನಿಕರಲ್ಲಿ ಅಸಮಾಧಾನ: ಕಳೆದ ಹಲವು ದಿನಗಳಿಂದ ಚಿರತೆಗಳು ಜನವಸತಿ ಸನಿಹದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಬಗ್ಗೆ ಸಾರ್ವಜನಿಕರು ಸಂಬಂಧಿತ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಕ್ರಮಕ್ಕೆ ಇಲಾಖೆಯ ಅಧಿಕಾರಿಗಳು ಮುಂದಾಗಿಲ್ಲ ಎಂಬ ಅಸಮಾಧಾನ ಜನರಲ್ಲಿ ವ್ಯಕ್ತವಾಗಿದೆ.

ಮೊಬೈಲ್ ಕ್ಯಾಮಾರಾದಲ್ಲಿ ದೃಶ್ಯಾವಳಿ ಸೆರೆ: ಜನವಸತಿ ಪ್ರದೇಶಕ್ಕೆ ಹೊಂದಿಕೊಂಡಿರುವ ಬೆಟ್ಟದ ಪ್ರದೇಶದಲ್ಲಿ ಕಂಡು ಬಂದ ಚಿರತೆಗಳು, ಸುಮಾರು ಇಪ್ಪತ್ತು ನಿಮಿಷಕ್ಕೂ ಹೆಚ್ಚು ಕಾಲ ಬೆಟ್ಟದ ಮೇಲೆ ಅತ್ತಿಂದಿತ್ತ ಓಡಾಡುವ ಹಾಗೂ ವಿಶ್ರಾಂತಿ ಭಂಗಿಯಲ್ಲಿನ ದೃಶ್ಯಾವಳಿಗಳು ಜನರ ಮೊಬೈಲ್ ಕ್ಯಾಮಾರಾದಲ್ಲಿ ಸೆರೆಯಾಗಿವೆ.

ಮಿಲನ ಮಹೋತ್ಸವಕ್ಕಾಗಿ ಬಂದ ಚಿರತೆ:ಸಂತಾನೋತ್ಪತ್ತಿಗೆ ಇದು ಸಕಾಲವಾಗಿದ್ದರಿಂದ ಜೋಡಿ ಚಿರತೆಗಳು ಬೆಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಸಾರ್ವಜನಿಕರು ವಿನಾಃ ಕಾರಣಕ್ಕೆ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಅರಣ್ಯ ಇಲಾಖೆಯ ಆರ್​ಎಫ್​ಒ ಶಿವರಾಜ ಮೇಟಿ ಹೇಳಿದ್ದಾರೆ.

ಆರ್​ಎಫ್​ಓ ಶಿವರಾಜ ಮೇಟಿ

ಹಲವು ದಿನದಿಂದ ಜನ ಜೋಡಿ ಚಿರತೆಯನ್ನು ಗಮನಿಸುತ್ತಿದ್ದಾರೆ. ಬಹುಶಃ ಒಂದೇ ಜೋಡಿ ಇದ್ದು ಆಗಾಗ ಬೇರೆ ಬೇರೆ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಸಂದೇಹವಿದೆ. ಇವು ಜನವಸತಿ ಪ್ರದೇಶಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ. ಹೀಗಾಗಿ ಜನ ಆತಂಕಪಡುವ ಅಗತ್ಯವಿಲ್ಲ ಎಂದಿದ್ದಾರೆ.

ರಾತ್ರಿ ಸಂದರ್ಭದಲ್ಲಿ ಒಂಟಿಯಾಗಿ ಓಡಾಡದಂತೆ ಎಚ್ಚರಿಕೆ ರವಾನಿಸಲಾಗುತ್ತಿದೆ. ಬೆಟ್ಟದಲ್ಲಿ ಬೋನು ಇಡುವ ಸಂಬಂಧ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಓದಿ:ಬಳ್ಳಾರಿ: ಐತಿಹಾಸಿಕ ಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ..

Last Updated : Oct 6, 2022, 8:56 PM IST

ABOUT THE AUTHOR

...view details