ಗಂಗಾವತಿ: ಮಗಳ ಜನ್ಮ ದಿನವೇ ಆಕೆಯ ಅಪ್ಪ ಹಾಗೂ ಅಮ್ಮ ತಮ್ಮ ನೇತ್ರದಾನ ಮಾಡುವುದಾಗಿ ಕೊಪ್ಪಳದ ಗವಿಮಠದ ಶ್ರೀಗಳ ಸಮ್ಮುಖದಲ್ಲಿ ವಾಗ್ದಾನ ಮಾಡಿ ಗಮನ ಸೆಳೆದಿದ್ದಾರೆ.
ನಗರದ ಉದ್ಯಮಿ ಕುಟುಂಬದ ಹಿನ್ನೆಲೆ ಹೊಂದಿರುವ ಹಾಗೂ ಖಾಸಗಿ ಹಣಕಾಸು ಸಂಸ್ಥೆಯೊಂದರ ಅಧ್ಯಕ್ಷ ಅಕ್ಕಿ ಆನಂದ ಹಾಗೂ ಅವರ ಪತ್ನಿ ಅಶ್ವಿನಿ ಅಕ್ಕಿ, ಇದೀಗ ಹುಬ್ಬಳ್ಳಿಯ ಎಂಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಗೆ ನೇತ್ರದಾನದ ವಾಗ್ದಾನ ಮಾಡಿದ್ದಾರೆ.