ಕೊಪ್ಪಳ:ಮತ ಎಣಿಕೆ ಕೇಂದ್ರದ ಸಿಬ್ಬಂದಿಯೊಬ್ಬರು ಅಸ್ವಸ್ಥಗೊಂಡ ಘಟನೆ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಹೈಸ್ಕೂಲ್ ಮೈದಾನದ ಮತ ಎಣಿಕೆ ಕೇಂದ್ರದಲ್ಲಿ ನಡೆದಿದೆ.
ಮತ ಎಣಿಕೆ ಕೇಂದ್ರದ ಮೇಲ್ವಿಚಾರಕ ವಿಜಯಕುಮಾರ್ ಬಾರಕೇರ ಎಂಬುವರು ಅಸ್ವಸ್ಥಗೊಂಡಿದ್ದಾರೆ. ಮುನಿರಾಬಾದ್ನಲ್ಲಿರುವ ಡಯಟ್ ಕಾಲೇಜಿನ ಪ್ರಾಚಾರ್ಯರಾಗಿರುವ ವಿಜಯಕುಮಾರ್ ಬಾರಕೇರ ಅವರು ಮಧುಮೇಹದಿಂದಾಗಿ ತೀವ್ರ ಅಸ್ವಸ್ಥಗೊಂಡಿದ್ದಾರೆ.