ಕರ್ನಾಟಕ

karnataka

ETV Bharat / state

ಹೆರಿಗೆಯಾದ ಹೆಂಡತಿ, ಮಗು ನೋಡಲು ಹೋಗದೇ ಕೊರೊನಾ ವಾರಿಯರ್ ಡ್ಯೂಟಿ

ಕೊಪ್ಪಳದಲ್ಲಿ ಕೊರೊನಾ ವಾರಿಯರ್ ಒಬ್ಬರು ಪತ್ನಿಗೆ ಹೆರಿಗೆಯಾಗಿ ಗಂಡು ಜನಿಸಿದ್ದು, ಕೊರೊನಾ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಮಗುವನ್ನು ನೋಡಲು ಹೋಗದೆ ಸೇವೆ ಮಾಡುತ್ತಿದ್ದಾರೆ. ಪತ್ನಿ ಹಾಗೂ ಮಗುವನ್ನು ವಿಡಿಯೋ ಕಾಲ್ ಮೂಲಕವೇ ನೋಡಿ ಸಂತೋಷಪಡುತ್ತಿದ್ದಾರೆ.

corona worrior not going to see newly borned baby
ಕೊರೊನಾ ವಾರಿಯರ್

By

Published : May 2, 2021, 8:45 AM IST

ಕೊಪ್ಪಳ:ಕೊರೊನಾ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಕೊರೊನಾ ವಾರಿಯರ್ಸ್ ತಮ್ಮ ವೈಯಕ್ತಿಕ ನೋವು ನಲಿವುಗಳನ್ನು ಮರೆತು ಸೇವೆಯಲ್ಲಿ ತೊಡಗಿದ್ದಾರೆ.

ಕೊರೊನಾ ವಾರಿಯರ್ ಮಂಜುನಾಥ ಘಾಡಿ

ಕೊಪ್ಪಳದ ಕಿಮ್ಸ್​ನಲ್ಲಿ ಕಳೆದ 6 ವರ್ಷಗಳಿಂದ ನರ್ಸಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಮಂಜುನಾಥ ಘಾಡಿ ಅವರ ಹೆಂಡತಿಗೆ ಏಪ್ರಿಲ್ 1 ರಂದು ಹೆರಿಗೆಯಾಗಿದ್ದು,ಗಂಡು ಮಗು ಜನಿಸಿದೆ. ಹೆರಿಗೆಯಾಗಿರುವ ತಮ್ಮ‌ ಪತ್ನಿ ಹಾಗೂ ಮಗುವನ್ನು ನೋಡಲೂ ಹೋಗದೆ ಕೋವಿಡ್ ಡ್ಯೂಟಿ ಮಾಡುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದವರಾದ ಮಂಜುನಾಥ ಘಾಡಿ ಅವರ ಪತ್ನಿಗೆ ಬಾಗಲಕೋಟೆ ಜಿಲ್ಲೆಯ ಕಮತಗಿಯ ತವರು ಮನೆಯಲ್ಲಿ ಹೆರಿಗೆಯಾಗಿದೆ. ಈಗ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಪಾಸಿಟಿವ್ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ. ಹೀಗಾಗಿ ಪತ್ನಿ ಹಾಗೂ ಮಗುವನ್ನು ನೋಡಲು ಹೋಗದೆ ಮಂಜುನಾಥ್ ಘಾಡಿ ಅವರು ಕೋವಿಡ್ ವಾರ್ಡ್​ನಲ್ಲಿ ಕರ್ತವ್ಯ ಮಾಡುತ್ತಿದ್ದಾರೆ.

ಪತ್ನಿ, ಮಗಳು ಹಾಗೂ ಕಳೆದ ತಿಂಗಳು ಜನಿಸಿರುವ ಮಗುವನ್ನು ನೋಡಬೇಕಿನಿಸಿದಾಗ ವಿಡಿಯೋ ಕಾಲ್ ಮಾಡಿ ನೋಡಿ ಖುಷಿಪಡುತ್ತಾರೆ. ಈಗ ಕೊರೊನಾ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವುದರಿಂದ ನಾನು ಅಲ್ಲಿಗೆ ಹೋಗುವುದು ಸಹ ಸರಿಯಲ್ಲ. ಸೇವೆಯ ಜೊತೆಗೆ ಮಗು ಹಾಗೂ ಬಾಣಂತಿಗೆ ಇನ್ಫೆಕ್ಷನ್ ಆಗಬಾರದು ಎಂಬ ಕಾಳಜಿಯಿಂದ ಪತ್ನಿ ಹಾಗೂ ಮಗುವನ್ನು ನೋಡಲು ಹೋಗುತ್ತಿಲ್ಲ. ಮಗುವನ್ನು ನೋಡಬೇಕು ಎಂಬ ಆಸೆಯಾಗುತ್ತದೆಯಾದರೂ ಸಹ ಇದು ಸಂದರ್ಭವಲ್ಲ. ಹೀಗಾಗಿ ಕೊರೊನಾ ಸೋಂಕು ಕಡಿಮೆಯಾಗುವರೆಗೂ ಮಗು ನೋಡಲು ಹೋಗದೆ ಸೇವೆ ಸಲ್ಲಿಸಲು ನಿರ್ಧರಿಸಿದ್ದೇನೆ ಎನ್ನುತ್ತಾರೆ ಮಂಜುನಾಥ ಘಾಡಿ.

ABOUT THE AUTHOR

...view details