ಕುಷ್ಟಗಿ(ಕೊಪ್ಪಳ): ಕೋವಿಡ್-19 ನಿಯಂತ್ರಣದಲ್ಲಿ ಸಕ್ರಿಯರಾಗಿರುವ ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಎನ್.ಹೆಚ್.ಎಂ. ಯೋಜನಾ ಕೆಲಸಗಾರರಿಗೆ ಅಪಾಯಕಾರಿ ಕೆಲಸ ಭತ್ಯೆಯಾಗಿ ಮಾಸಿಕ 10 ಸಾವಿರ ರೂ. ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಭಾಷಣದಿಂದ ಕೊರೊನಾ ವಾರಿಯರ್ಸ್ ಹೊಟ್ಟೆ ತುಂಬುವುದಿಲ್ಲ, ಬೇಡಿಕೆ ಈಡೇರಿಸಿ: ಸಿಐಟಿಯು ಹಕ್ಕೊತ್ತಾಯ - ಭಾಷಣದಿಂದ ಕೊರೊನಾ ವಾರಿಯರ್ಸ್ ಹೊಟ್ಟೆ ತುಂಬುವುದಿಲ್ಲ
ಸಿಐಟಿಯು ಜಿಲ್ಲಾಧ್ಯಕ್ಷೆ ಕಲಾವತಿ ಮೆಣೆದಾಳ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಯಿತು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಲಾಯಿತು. ಇದೇ ವೇಳೆ ಮಾತನಾಡಿದ ಕಲಾವತಿ ಬರೀ ಭಾಷಣದಿಂದ ಕೊರೊನಾ ವಾರಿಯರ್ಸ್ ಹೊಟ್ಟೆ ತುಂಬುವುದಿಲ್ಲ. ನ್ಯಾಯಯುತ ಬೇಡಿಕೆ ಈಡೇರಿಸಿ ಎಂದು ಹಕ್ಕೊತ್ತಾಯ ಮಂಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷೆ ಕಲಾವತಿ ಮೆಣೆದಾಳ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಿರತರಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಇದೇ ವೇಳೆ ಮಾತನಾಡಿದ ಅವರು, ಬರೀ ಭಾಷಣದಿಂದ ಕೊರೊನಾ ವಾರಿಯರ್ಸ್ ಹೊಟ್ಟೆ ತುಂಬುವುದಿಲ್ಲ. ನ್ಯಾಯಯುತ ಬೇಡಿಕೆ ಈಡೇರಿಸಿ ಎಂದು ಹಕ್ಕೊತ್ತಾಯ ಮಂಡಿಸಿದರು.
ಆಶಾ, ಅಂಗನವಾಡಿ, ಬಿಸಿಯೂಟ ಹಾಗೂ ಎನ್.ಹೆಚ್.ಎಂ. ಯೋಜನಾ ಆರೋಗ್ಯ ಇಲಾಖೆಯ, ಸುರಕ್ಷತಾ ಸಾಧನ ಸಲಕರಣೆ ಕೊರತೆಯ ನಡುವೆಯೂ ಸಿಬ್ಬಂದಿ ಕೋವಿಡ್-19 ನಿಯಂತ್ರಣದ ಸೇವೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಅಪಾಯಕಾರಿ ಕೆಲಸ ಭತ್ಯೆ ಬಗ್ಗೆ ಬೇಡಿಕೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಸ್ಪಂಧಿಸಿಲ್ಲವೆಂದು ಆರೋಪಿಸಿದರು.