ಕರ್ನಾಟಕ

karnataka

ETV Bharat / state

ನಗರದ ಕೋವಿಡ್ ಆಸ್ಪತ್ರೆಯಲ್ಲಿ ಮೊದಲ ದಿನವೇ 48 ಸೋಂಕಿತರು ದಾಖಲು - ಕೋವಿಡ್ ಆಸ್ಪತ್ರೆ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಆರಂಭಿಸಲಾದ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಮೊದಲ ದಿನವೇ 48 ಸೋಂಕಿತರು ದಾಖಲಾಗಿದ್ದಾರೆ.

hospital
hospital

By

Published : Jul 30, 2020, 8:15 AM IST

ಗಂಗಾವತಿ( ಕೊಪ್ಪಳ):ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ಇಲ್ಲಿನ ಉಪ ವಿಭಾಗ ಆಸ್ಪತ್ರೆಯಲ್ಲಿ ಆರಂಭಿಸಲಾದ ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ಮೊದಲ ದಿನವೇ 48 ಸೋಂಕಿತರು ದಾಖಲಾಗಿದ್ದಾರೆ.

ಉಪ ವಿಭಾಗ ಆಸ್ಪತ್ರೆಯ ಕಟ್ಟಡ ಹಾಗೂ ಸೇವಾ ವಲಯವನ್ನು ವಿಭಜಿಸಿ ನೂರು ಹಾಸಿಗೆ ಪೈಕಿ ಐವತ್ತು ಹಾಸಿಗೆಗಳನ್ನು ಸಾಮಾನ್ಯ ಕಾಯಿಲೆ, ಚಿಕಿತ್ಸೆಗಾಗಿ ಮಿಕ್ಕ ಐವತ್ತು ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಮೀಸಲಿಡಲಾಗಿತ್ತು.

ಆದರೆ, ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಈಗಾಗಲೆ 48 ಜನರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಹಾಸಿಗೆ ಭರ್ತಿಯಾದ ಬಳಿಕ ಮತ್ತೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗುವುದು ಎಂದು ಸಿಬ್ಬಂದಿ ತಿಳಿಸಿದ್ದಾರೆ.

ABOUT THE AUTHOR

...view details