ಕುಷ್ಟಗಿ :ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಾಣಕಶಿರೂರು ಗ್ರಾಮದ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ಇದೀಗ ಕುಷ್ಟಗಿ ತಾಲೂಕಿನಲ್ಲಿ ಆತಂಕ ಮನೆ ಮಾಡಿದೆ.
ಗರ್ಭಿಣಿಗೆ ಕೊರೊನಾ ಸೋಂಕು.. ಕುಷ್ಟಗಿ ಜನರಲ್ಲಿ ಆತಂಕ.. - ಗರ್ಭಿಣಿ ಮಹಿಳೆಯಲ್ಲಿ ಕೊರೊನಾ ದೃಢ
ಕೊರೊನಾ ದೃಢವಾಗಿರುವ ಗರ್ಭಿಣಿ ಮಹಿಳೆಯ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನೆಲ್ಲ ಭಾಗವಹಿಸಿದ್ದ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಕೆಲ ಜನರನ್ನು ಕ್ವಾರಂಟೈನ್ನಲ್ಲಿಡಲಾಗಿದ್ದು ಇದೀಗ ಕೊಪ್ಪಳ ಖಾಸಗಿ ಹೋಟೆಲ್ಗೆ ಸ್ಥಳಾಂತರಿಸಲಾಗಿದೆ.
![ಗರ್ಭಿಣಿಗೆ ಕೊರೊನಾ ಸೋಂಕು.. ಕುಷ್ಟಗಿ ಜನರಲ್ಲಿ ಆತಂಕ.. Coronavirus Anxiety](https://etvbharatimages.akamaized.net/etvbharat/prod-images/768-512-7094329-1047-7094329-1588836595307.jpg)
ಈ ಗರ್ಭಿಣಿ ತನ್ನ ತವರು ಮನೆ ಗದಗ ಜಿಲ್ಲೆಯ ರೋಣ ಪಟ್ಟಣದ ಕೃಷ್ಣಾಪುರಕ್ಕೆ ಬಂದಾಗ, ಸೀಮಂತ ಕಾರ್ಯಕ್ರಮ ನಡೆದಿತ್ತು. ಅದೇ ಗರ್ಭಿಣಿಗೆ ಕೊರೊನಾ ಸೋಂಕು ತಗುಲಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಸೀಮಂತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಷ್ಟಗಿ ತಾಲೂಕಿನ ನಿಲೋಗಲ್ ಗ್ರಾಮದ ಕೆಲವರನ್ನು ದ್ವಿತೀಯ ಸಂಪರ್ಕದ ಹಿನ್ನೆಲೆಯಲ್ಲಿ ತಾಲೂಕಿನ ನಿಡಶೇಸಿ ಮುರಾರ್ಜಿ ವಸತಿ ಶಾಲೆಯಲ್ಲಿ ಮೇ4ರಂದು ಕ್ವಾರಂಟೈನಲ್ಲಿಸಿದ್ದಾರೆ.
ಆ ವೇಳೆ ಗಂಟಲು ದ್ರವದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮೇ 6ರ ಬುಧವಾರ ತಡರಾತ್ರಿ ನಿಡಶೇಷಿಯಲ್ಲಿ ಕ್ವಾರಂಟೈನಲ್ಲಿದ್ದವರನ್ನು ಕೊಪ್ಪಳ ಖಾಸಗಿ ಹೋಟೆಲ್ಗೆ ಸ್ಥಳಾಂತರಿಸಲಾಗಿದೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಿಲೋಗಲ್ ಹಾಗೂ ಕುಷ್ಟಗಿ ತಾಲೂಕಿನಲ್ಲಿ ಸಹಜವಾಗಿ ಆತಂಕ ಉಂಟಾಗಿದೆ.