ಕೊಪ್ಪಳ: ವಿದೇಶ ಹಾಗೂ ಬೇರೆ ಬೇರೆ ಕಡೆಯಿಂದ ಈವರೆಗೆ ಜಿಲ್ಲೆಗೆ ಬಂದಿರುವ 63 ಜನರ ಮೇಲೆ ನಿಗಾ ಇಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಮಾಹಿತಿ ನೀಡಿದ್ದಾರೆ.
ಕೊಪ್ಪಳದಲ್ಲಿ ಕೊರೊನಾ ಕಟ್ಟೆಚ್ಚರ: 63 ಜನರ ಮೇಲೆ ನಿಗಾ - corona virus
ರಾಜ್ಯದಲ್ಲಿ ಕೊರೊನಾ ಸೋಂಕಿನ ವಿರುದ್ಧ ಸಮರ ಸಾರಲಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿಯೂ ಕಟ್ಟೆಚ್ಚರ ವಹಿಸಲಾಗಿದ್ದು, ವಿದೇಶದಿಂದ ಬಂದ 63 ಜನರ ಮೇಲೆ ನಿಗಾ ವಹಿಸಲಾಗಿದೆ. ಇದುವರೆಗೂ ಜಿಲ್ಲೆಯಲ್ಲಿ ಸೋಂಕು ಪತ್ತೆಯಾಗಿಲ್ಲ.
![ಕೊಪ್ಪಳದಲ್ಲಿ ಕೊರೊನಾ ಕಟ್ಟೆಚ್ಚರ: 63 ಜನರ ಮೇಲೆ ನಿಗಾ corona-virus-cases-in-koppal-district](https://etvbharatimages.akamaized.net/etvbharat/prod-images/768-512-6531669-thumbnail-3x2-kpl.jpg)
ಪಿ. ಸುನೀಲಕುಮಾರ್
ಈ ಕುರಿತಂತೆ ಮಾಧ್ಯಮ ಬುಲೆಟಿನ್ ಬಿಡುಗಡೆ ಮಾಡಿರುವ ಅವರು, 63 ಜನರನ್ನು ಏರ್ಪೋರ್ಟ್ನಲ್ಲಿ ಸ್ಕ್ರೀನಿಂಗ್ ಮಾಡಲಾಗಿದ್ದು, ಅವರ ಮೇಲೆ ನಿಗಾ ಇಡಲಾಗಿದೆ. ಈ ಪೈಕಿ 27 ಜನರು 14 ದಿನ ಐಸೋಲೇಷನ್ ಮುಗಿಸಿದ್ದಾರೆ.
4 ಜನರು 24 ದಿನ ಐಸೋಲೇಷನ್ ದಿನಗಳನ್ನು ಕಂಪ್ಲೀಟ್ ಮಾಡಿದ್ದಾರೆ. ಇನ್ನುಳಿದ 36 ಜನರು ಹೊಮ್ ಕ್ವಾರಂಟೈನ್ನಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.