ಕರ್ನಾಟಕ

karnataka

ETV Bharat / state

ಕೊರೊನಾ ಸೋಕಿಂತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆ ನ್ಯಾಯಾಲಯಕ್ಕೆ ಹಾಜರು! - ಕೊಪ್ಪಳದ ಜೆಎಂಎಫ್​​​​ಸಿ ನ್ಯಾಯಾಲಯ

ಕೊರೊನಾ ಸೋಕಿಂತ ವ್ಯಕ್ತಿಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯನ್ನು ನ್ಯಾಯಾಧೀಶ ಹರೀಶ್ ಪಾಟೀಲ್ ಅವರ ಮುಂದೆ ಹಾಜರು ಪಡಿಸಲಾಯಿತು.

corona updates in koppal
ಕೊರೊನಾ ಸೋಕಿಂತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆ ನ್ಯಾಯಾಲಯಕ್ಕೆ ಹಾಜರು

By

Published : Apr 21, 2020, 6:26 PM IST

ಕೊಪ್ಪಳ:ಕೊರೊನಾ ಸೋಕಿಂತ ವ್ಯಕ್ತಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಹಿಳೆಯನ್ನು ಇಂದು ನಗರದಲ್ಲಿರುವ ಜೆಎಂಎಫ್​​​​ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿತ್ತು.

ಮುಂಬೈನಿಂ ದ ಹುಬ್ಬಳ್ಳಿಗೆ ಬಂದು ಏಪ್ರಿಲ್ 13ರಂದು ರಾತ್ರಿ ಕೊಪ್ಪಳಕ್ಕೆ ಬಂದಿದ್ದ ಮಹಿಳೆಯನ್ನು ನ್ಯಾಯಾಧೀಶ ಹರೀಶ್ ಪಾಟೀಲ್ ಅವರ ಮುಂದೆ ಹಾಜರು ಪಡಿಸಲಾಯಿತು.

ಕಲಂ 164 ಸಿಆರ್​​​ಪಿಸಿ ಅಡಿಯಲ್ಲಿ ಮಹಿಳೆ ತನ್ನ ಹೇಳಿಕೆ ನೀಡಿದ್ದು, ಇವರು ಧಾರವಾಡದ P194 ಸೋಕಿಂತ ವ್ಯಕ್ತಿಯ ಜೊತೆ ಬಸ್​​​​​ನಲ್ಲಿ ಪ್ರಯಾಣ ಮಾಡಿದ್ದರು. ಮುಂಬೈ ಮೂಲದ ಮಹಿಳೆಗೆ ಪಾಸ್ ಕೊಡಿಸುವುದಾಗಿ ಹೇಳಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಬಸವ ಹೊಳಗುಂದಿ, ಏಪ್ರಿಲ್ 13ರಂದು ರಾತ್ರಿ ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಕರೆ ತಂದಿದ್ದರಂತೆ. ಈ ಕುರಿತಂತೆ ಗುರುಬಸವ ಹೊಳಗುಂದಿ ಹಾಗೂ ಮಹಿಳೆ ವಿರುದ್ಧ ಕೊಪ್ಪಳ ನಗರ ಠಾಣೆಯಲ್ಲಿ ತಹಶೀಲ್ದಾರ್ ದೂರು ದಾಖಲಿಸಿದ್ದರು.

ABOUT THE AUTHOR

...view details