ಕರ್ನಾಟಕ

karnataka

ETV Bharat / state

SBI ಬ್ಯಾಂಕ್ ಉದ್ಯೋಗಿಗೆ ಕೊರೊನಾ.. ಮಧ್ಯಾಹ್ನ 2.30ಕ್ಕೆ ಬ್ಯಾಂಕ್ ವ್ಯವಹಾರ ಸ್ಥಗಿತ..

ಅನಾರೋಗ್ಯದ ಹಿನ್ನೆಲೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ​ ಪರೀಕ್ಷೆ ಮಾಡಿಸಿದ 20 ನಿಮಿಷಗಳಲ್ಲಿ ಎಸ್​ಬಿಐ ಬ್ಯಾಂಕ್​ ಉದ್ಯೋಗಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢವಾಗಿದೆ..

Bank transaction breakdown
SBI ಬ್ಯಾಂಕ್ ಉದ್ಯೋಗಿಗೆ ಕೊರೊನಾ

By

Published : Aug 7, 2020, 7:38 PM IST

ಕುಷ್ಟಗಿ (ಕೊಪ್ಪಳ) :ಪಟ್ಟಣದ ಮಾರುತಿ ವೃತ್ತದಲ್ಲಿರುವ ಎಸ್​ಬಿಐ ಬ್ಯಾಂಕ್​ ಉದ್ಯೋಗಿಯೊಬ್ಬರಲ್ಲಿ ಕೊರೊನಾ ಸೋಂಕು ದೃಢವಾಗಿರುವ ಹಿನ್ನೆಲೆ ಬ್ಯಾಂಕ್‌ನ ಸೀಲ್​ಡೌನ್ ಮಾಡಲಾಗಿದೆ.

ಇಳಕಲ್ ನಿವಾಸಿಯಾಗಿರುವ ಬ್ಯಾಂಕ್ ಉದ್ಯೋಗಿ ಕುಷ್ಟಗಿ ಎಸ್​ಬಿಐನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅನಾರೋಗ್ಯದ ಹಿನ್ನೆಲೆ ಕುಷ್ಟಗಿ ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಿದ 20 ನಿಮಿಷಗಳಲ್ಲಿ ಕೊರೊನಾ ಸೋಂಕು ದೃಢವಾಗಿದೆ.

ಕೊರೊನಾ ದೃಢವಾಗಿರುವುದು ಮಾಹಿತಿ ತಿಳಿಯುತ್ತಿದ್ದಂತೆ ಮಧ್ಯಾಹ್ನ 2.30ಕ್ಕೆ ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಲಾಯಿತು. ಸೋಂಕಿತ ಬ್ಯಾಂಕ್ ಉದ್ಯೋಗಿ ಹೋಂ ಐಸೋಲೇಷನ್‌ಗೆ ಇಚ್ಚಿಸಿದ ಹಿನ್ನೆಲೆ ಅಲ್ಲಿಗೆ ಕಳುಹಿಸಿಕೊಡಲಾಗಿದೆ.

ಎರಡನೇ ಶನಿವಾರ, ಭಾನುವಾರ ರಜೆ ಹಿನ್ನೆಲೆ ಸೋಮವಾರ ಬ್ಯಾಂಕಿನ ಸಿಬ್ಬಂದಿಗೆ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮಾಡಿಸಲಾಗುತ್ತಿದೆ. ಮಂಗಳವಾರ ಬ್ಯಾಂಕ್ ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ.

ABOUT THE AUTHOR

...view details