ಕುಷ್ಟಗಿ(ಕೊಪ್ಪಳ):ಕುಷ್ಟಗಿ ತಾಲೂಕು ಕಬ್ಬರಗಿ ಗ್ರಾಮದ ಯುವಕನಿಗೆ ಕೊರೊನಾ ಸೋಂಕು ತಗುಲಿದೆ. ಗ್ರಾಮ ಪಂಚಾಯತ್ ವತಿಯಿಂದ ಇಡೀ ಗ್ರಾಮವನ್ನೇ ಸೀಲ್‌ಡೌನ್ ಮಾಡಲಾಗಿದೆ.
ಕಬ್ಬರಗಿ ಗ್ರಾಮದ ಯುವಕನಿಗೆ ಕೊರೊನಾ, ಇಡೀ ಗ್ರಾಮವೇ ಸೀಲ್‌ಡೌನ್
ಮಂಗಳೂರಿಗೆ ತೆರಳಿದ್ದ ಹೋಗಿದ್ದ ವ್ಯಕ್ತಿ ಜುಲೈ 1ರಂದು ಕಬ್ಬರಗಿಗೆ ಹಿಂತಿರುಗಿದ್ದ. ಅದೇ ದಿನ ಆತನ ಗಂಟಲು ದ್ರವ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಜೊತೆಗೆ ಆತನಿಗೆ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು..
ಮಂಗಳೂರಿಗೆ ತೆರಳಿದ್ದ ಹೋಗಿದ್ದ ವ್ಯಕ್ತಿ ಜುಲೈ 1ರಂದು ಕಬ್ಬರಗಿಗೆ ಹಿಂತಿರುಗಿದ್ದ. ಅದೇ ದಿನ ಆತನ ಗಂಟಲು ದ್ರವ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ಕಳುಹಿಸಲಾಗಿತ್ತು. ಜೊತೆಗೆ ಆತನಿಗೆ ಹೋಂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿತ್ತು. ಜುಲೈ 5ರಂದು ಅರೋಗ್ಯ ಇಲಾಖೆ ಸದರಿ ಯುವಕನಿಗೆ ಕೊರೊನಾ ದೃಢೀಕೃತವಾದ ಹಿನ್ನೆಲೆ ಕೊಪ್ಪಳ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದಿದೆ.
ಸದ್ಯ ಸೋಂಕಿತನ ಗ್ರಾಮವನ್ನು ಪ್ರವೇಶಿಸುವ ಎಲ್ಲಾ ಮುಖ್ಯರಸ್ತೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಸುತ್ತಮುತ್ತಲ 14 ಮನೆಗಳ ಪ್ರದೇಶವನ್ನು ಕಂಟೇನ್ಮೆಂಟ್ ಎಂದು ಗುರುತಿಸಿ ಜನ ಸಂಚಾರ ನಿರ್ಬಂಧಿಸಿದೆ. ಪಿಡಿಒ ನಿಂಗಪ್ಪ ಮೂಲಿಮನಿ ಕಂಟೇನ್ಮೆಂಟ್ ಪ್ರದೇಶದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಆಹಾರ ಸಾಮಗ್ರಿಗಳನ್ನು ವಿತರಿಸಿದ್ದಾರೆ.