ಗಂಗಾವತಿ:ಬೆಂಬಲಿಗನೊಂದಿಗೆ ಓಡಾಡಿದ್ದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯನಿಗೆ ಕೊರೊನಾ ಸೋಂಕು ತಗಲಿದ್ದು, ಸದ್ಯ ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಬಲಿಗನಿಂದ ಕಾಂಗ್ರೆಸ್ ಮುಖಂಡನಿಗೆ ಕೊರೊನಾ ಕಂಟಕ - Gangawati Congress urban unit
ಬೆಂಬಲಿಗನೊಂದಿಗೆ ಓಡಾಡಿದ್ದ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯನಿಗೆ ಕೊರೊನಾ ಸೋಂಕು ತಗಲಿದ್ದು, ಸದ್ಯ ಸೋಂಕಿತನನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಬಲಿಗನಿಂದ ಕಾಂಗ್ರೆಸ್ ಮುಖಂಡನಿಗೆ ಕೊರೊನಾ ಕಂಟಕ
ನಗರದ 22 ವಾರ್ಡಿನ ಸದಸ್ಯ ಹಾಗೂ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯ ಬೆಂಬಲಿಗನೂ ಆಗಿರುವ ಈ ಮುಖಂಡ ಲಾಕ್ಡೌನ್ ಸಂದರ್ಭದಲ್ಲಿ ತನ್ನ ವಾರ್ಡ್ನ ನೂರಾರು ಕುಟುಂಬಕ್ಕೆ ಆಹಾರದ ಕಿಟ್ ನೀಡುವ ಮೂಲಕ ಮಾನವೀಯತೆ ಮೆರೆದಿದ್ದರು.
ಸೋಂಕಿತ ವ್ಯಕ್ತಿಯ ಸಹಚರನೊಬ್ಬನಿಗೆ ಕೊರೊನಾ ಸೋಂಕು ತಗಲಿದ್ದು ಅದು ಬೆಳಕಿಗೆ ಬಂದಿರಲಿಲ್ಲ. ಹೀಗಾಗಿ ತಿಳಿಯದೆ ಆತನೊಂದಿಗೆ ಕಾರಿನಲ್ಲಿ ಓಡಾಡಿದ್ದು, ಕಾಂಗ್ರೆಸ್ ಮುಖಂಡನಿಗೂ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.