ಕರ್ನಾಟಕ

karnataka

ETV Bharat / state

ಗಂಗಾವತಿ ನಗರ ಠಾಣೆ ಸಿಬ್ಬಂದಿಗೆ ಕೊರೊನಾ: ಠಾಣೆ ಸೀಲ್​ಡೌನ್​..?

ಗಂಗಾವತಿ ನಗರ ಠಾಣೆಯ 53 ವರ್ಷದ ಸಿಬ್ಬಂದಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸದ್ಯ ಇವರನ್ನು ಕೋವಿಡ್-19 ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

By

Published : Jul 14, 2020, 2:09 PM IST

Gangavathi
ಗಂಗಾವತಿ ನಗರ ಠಾಣೆ ಸಿಬ್ಬಂದಿಗೆ ಕೊರೊನಾ ಪಾಸಿಟಿವ್​

ಗಂಗಾವತಿ: ಫೋಕ್ಸೋ ಪ್ರಕರಣದಲ್ಲಿನ ಆರೋಪಿಗೆ ಸೋಂಕು ತಗುಲಿರುವ ಬಗ್ಗೆ ಗೊತ್ತಿಲ್ಲದೇ ಬಂಧನಕ್ಕೆ ತೆರಳಿದ್ದ ಕನಕಗಿರಿ ಠಾಣೆಯ ಪೊಲೀಸರಿಗೆ ಕೊರೊನಾ ಆತಂಕ ಎದುರಾದ ಬೆನ್ನಲ್ಲೆ ನಗರ ಠಾಣೆಯ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ.

53 ವರ್ಷದ ಸಿಬ್ಬಂದಿಯನ್ನು ಇದೀಗ ಕೋವಿಡ್-19 ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ವ್ಯಕ್ತಿಯ ಸಂಪರ್ಕದಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಜನರ ಪ್ರಾಥಮಿಕ ಹಾಗೂ ದ್ವಿತೀಯ ಸಂರ್ಪಕಿತ ವ್ಯಕ್ತಿಗಳ ಪಟ್ಟಿಯನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಿದೆ. ಈಗ ಎಲ್ಲ ಸಿಬ್ಬಂದಿಗೆ ಕೋವಿಡ್ ಟೆಸ್ಟ್ ಮಾಡಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ತ್ವರಿತ ಫಲಿತಾಂಶಕ್ಕಾಗಿ ವಿಶೇಷ ಸ್ವ್ಯಾ ಬ್ ಟೆಸ್ಟ್ ಕಿಟ್ ಬಳಕೆ ಮಾಡಲಾಗುತ್ತಿದೆ. ನಗರಸಭೆ ಸಿಬ್ಬಂದಿಯಿಂದ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗಿದೆ. ಠಾಣೆಯನ್ನು ಸೀಲ್​ಡೌನ್ ಮಾಡಬೇಕೆ ಅಥವಾ ಬೇಡವೇ ಎಂಬುವುದರ ಬಗ್ಗೆ ಇದೀಗ ಅಧಿಕಾರಿಗಳು ಜಿಲ್ಲಾಧಿಕಾರಿ ಮಟ್ಟದಲ್ಲಿ ಚರ್ಚಿಸುತ್ತಿದ್ದಾರೆ. ಇಂದು ಸಂಜೆಯೊಳಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಇನ್ನು ಕನಕಗಿರಿಯ ಠಾಣೆಯ 22 ಪ್ರಾಥಮಿಕ ಸಂಪರ್ಕಿತರ ವರದಿ ನೆಗೆಟಿವ್ ಬಂದಿದೆ.

ABOUT THE AUTHOR

...view details