ಕೊಪ್ಪಳ :ಜಿಲ್ಲೆಯಲ್ಲಿಂದು ನಾಲ್ವರಿಗೆ ಕೊರೊನಾ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.
ಇಂದು ಕೊಪ್ಪಳ ಜಿಲ್ಲೆಯಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ - koppal corona update
ಕೊರೊನಾಗೆ ಈವರೆಗೆ ಇಬ್ಬರು ಬಲಿಯಾಗಿದ್ದು, ಒಟ್ಟು 68 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, ಸದ್ಯ 35 ಸಕ್ರಿಯ ಪ್ರಕರಣಗಳಿವೆ.
![ಇಂದು ಕೊಪ್ಪಳ ಜಿಲ್ಲೆಯಲ್ಲಿ ನಾಲ್ವರಿಗೆ ಕೊರೊನಾ ಪಾಸಿಟಿವ್ Corona positive for four in Koppal district](https://etvbharatimages.akamaized.net/etvbharat/prod-images/768-512-7881827-23-7881827-1593790929721.jpg)
31 ವರ್ಷದ ಪುರುಷ (ಪಿ-18406), 31 ವರ್ಷದ ಪುರುಷ (ಪಿ-18407), 45 ವರ್ಷದ ಮಹಿಳೆ (ಪಿ-18408) ಹಾಗೂ 44 ವರ್ಷದ ಮಹಿಳೆಗೆ (ಪಿ- 18409) ಸೋಂಕು ದೃಢಪಟ್ಟಿದೆ. ಇದಲ್ಲದೆ, ಇಂದು ನಾಲ್ವರು ಸೋಂಕಿತರು ಗುಣಮುಖರಾಗಿ ಕೋವಿಡ್ -19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾಗೆ ಈವರೆಗೆ ಇಬ್ಬರು ಬಲಿಯಾಗಿದ್ದು, ಒಟ್ಟು 68 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಸದ್ಯ, 35 ಸಕ್ರಿಯ ಪ್ರಕರಣಗಳಿವೆ.
ಎಸ್ಎಆರ್ಐ, ಐಎಲ್ಐ ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 10,964 ಜನರ ಗಂಟಲು ದ್ರವ ಮಾದರಿ ಪಡೆಯಲಾಗಿದೆ. ಈ ಪೈಕಿ 9,900 ಜನರ ವರದಿ ನೆಗಟಿವ್ ಬಂದಿದ್ದು, 959 ಜನರ ವರದಿ ಬರುವುದು ಬಾಕಿಯಿದೆ.