ಕೊಪ್ಪಳ: ಜಿಲ್ಲೆಯಲ್ಲಿ ಗುರುವಾರ 560 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು, 15 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿ 154, ಗಂಗಾವತಿ 322, ಕುಷ್ಟಗಿ 51 ಹಾಗು ಯಲಬುರ್ಗಾ ತಾಲೂಕಿನ 33 ಸೇರಿ ಒಟ್ಟು 560 ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 23,892 ಪ್ರಕರಣಗಳು ಪತ್ತೆಯಾಗಿವೆ. 406 ಸೋಂಕಿತರು ಮೃತಪಟ್ಟಿದ್ದಾರೆ.