ಕರ್ನಾಟಕ

karnataka

ETV Bharat / state

ದೋಟಿಹಾಳ ಅಡ್ಡಪಲ್ಲಕ್ಕಿ ರಾದ್ದಾಂತ ಪ್ರಕರಣ: ಬಂಧಿತ ಐವರಿಗೆ ಕೊರೊನಾ ದೃಢ - Koppal News

ಕುಷ್ಟಗಿ ತಾಲೂಕಿನ ದೋಟಿಹಾಳ ಅಡ್ಡಪಲ್ಲಕ್ಕಿ ರಾದ್ದಾಂತ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ 50 ಮಂದಿ ಆರೋಪಿಗಳ ಪೈಕಿ 5 ಜನರಿಗೆ ಕೊರೊನಾ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Corona positive for 5 arrested people
ದೋಟಿಹಾಳ ಅಡ್ಡಪಲ್ಲಕ್ಕಿ ರಾದ್ದಾಂತ ಪ್ರಕರಣ: ಬಂಧಿತ ಐವರಿಗೆ ಕೊರೊನಾ ದೃಢ

By

Published : Aug 21, 2020, 8:23 PM IST

ಕುಷ್ಟಗಿ (ಕೊಪ್ಪಳ):ದೋಟಿಹಾಳ ಅಡ್ಡಪಲ್ಲಕ್ಕಿ ರಾದ್ದಾಂತ ಪ್ರಕರಣದಲ್ಲಿ ಪೊಲೀಸರ ವಶದಲ್ಲಿದ್ದ 50 ಮಂದಿ ಆರೋಪಿಗಳ ಪೈಕಿ 5 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಆರೋಗ್ಯ ಇಲಾಖೆ ಇಂದು ನಡೆಸಿದ ರ್ಯಾಪಿಡ್​ ಆ್ಯಂಟಿಜೆನ್​ ಟೆಸ್ಟ್​ನಲ್ಲಿ ಐವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸೋಂಕಿತರನ್ನು ಪ್ರತ್ಯೇಕಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ದೋಟಿಹಾಳ ಅಡ್ಡಪಲ್ಲಕ್ಕಿ ರಾದ್ದಾಂತ ಪ್ರಕರಣದಲ್ಲಿ 50 ಜನರನ್ನು ಬಂಧಿಸಿದ ಬೆನ್ನಲ್ಲೆ, ಇನ್ನೂ 50ಕ್ಕೂ ಹೆಚ್ಚು ಯುವಕರು ಬಂಧನ ಭೀತಿಯಿಂದ ಗ್ರಾಮ ತೊರೆದಿದ್ದಾರೆ. ಕೆಲವರು ತಮ್ಮ ಉದ್ಯೋಗಕ್ಕೆ ವಾಪಸಾಗಿದ್ದಾರೆಂದು ಮೂಲಗಳು ಖಚಿತ ಪಡಿಸಿವೆ.

ABOUT THE AUTHOR

...view details