ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ 412 ಪಾಸಿಟಿವ್ ಪ್ರಕರಣಗಳು ಪತ್ತೆ, 7 ಸಾವು - ಕೊಪ್ಪಳ ಕೊರೊನಾ ಕೇಸ್

ಕೊಪ್ಪಳ ಜಿಲ್ಲೆಯಲ್ಲಿ ಸದ್ಯ 4,140 ಸಕ್ರಿಯ ಪ್ರಕರಣಗಳಿವೆ. ಆ ಪೈಕಿ 3,730 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಉಳಿದಂತೆ 410 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

koppal
ಕೊಪ್ಪಳದಲ್ಲಿ 412 ಪಾಸಿಟಿವ್ ಪ್ರಕರಣಗಳು ಪತ್ತೆ

By

Published : May 6, 2021, 6:54 AM IST

ಕೊಪ್ಪಳ: ಜಿಲ್ಲೆಯಲ್ಲಿ ಬುಧವಾರ 412 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 20,439ಕ್ಕೆ ಏರಿಕೆಯಾಗಿದೆ.

ಕೊಪ್ಪಳ ತಾಲೂಕಿನಲ್ಲಿ 93, ಗಂಗಾವತಿ 199, ಕುಷ್ಟಗಿ 95 ಹಾಗು ಯಲಬುರ್ಗಾದಲ್ಲಿನ 25 ಜನರಿಗೆ ಸೋಂಕು ತಗುಲಿದೆ. ನಿನ್ನೆ 7 ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಮೂಲಕ ಮೃತರ ಸಂಖ್ಯೆ 330ಕ್ಕೆ ತಲುಪಿದೆ.

ನಿನ್ನೆ 246 ಜನರೂ ಸೇರಿದಂತೆ ಈವರೆಗೆ ಒಟ್ಟು 15,969 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 4,140 ಸಕ್ರಿಯ ಪ್ರಕರಣಗಳಿವೆ. ಆ ಪೈಕಿ 3,730 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ. 410 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಬೆಡ್ ಬುಕ್ಕಿಂಗ್ ದಂಧೆಯಲ್ಲಿ ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಪಾತ್ರ ಇಲ್ಲ: ತೇಜಸ್ವಿ ಸೂರ್ಯ

ABOUT THE AUTHOR

...view details