ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ 308 ಕೋವಿಡ್‌ ಸೋಂಕು ಪ್ರಕರಣ ಪತ್ತೆ, ನಾಲ್ವರು ಬಲಿ

ಕೊಪ್ಪಳ ಜಿಲ್ಲೆಯಲ್ಲಿ ಮಂಗಳವಾರ ಪತ್ತೆಯಾದ ಕೋವಿಡ್‌ ಪ್ರಕರಣಗಳ ಮಾಹಿತಿ ಹೀಗಿದೆ..

koppal
ಕೊಪ್ಪಳದಲ್ಲಿ 308 ಪಾಸಿಟಿವ್ ಪ್ರಕರಣ ಪತ್ತೆ

By

Published : May 26, 2021, 7:17 AM IST

ಕೊಪ್ಪಳ: ಜಿಲ್ಲೆಯಲ್ಲಿ ನಿನ್ನೆ 308 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಒಟ್ಟು ನಾಲ್ವರು ಸೋಂಕಿತರು ಸಾವನ್ನಪ್ಪಿದ್ದಾರೆ.

ಕೊಪ್ಪಳ ತಾಲೂಕಿನಲ್ಲಿ 119, ಗಂಗಾವತಿ 62, ಕುಷ್ಟಗಿ 62 ಹಾಗು ಯಲಬುರ್ಗಾ ತಾಲೂಕಿನ 65 ಪ್ರಕರಣ ಸೇರಿ 308 ಕೋವಿಡ್​ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 29,105 ಸೋಂಕು ಪ್ರಕರಣಗಳು ದೃಢಪಟ್ಟಿವೆ. ಈವರೆಗಿನ ಸಾವಿನ ಸಂಖ್ಯೆ 476 ತಲುಪಿದೆ.

ನಿನ್ನೆ ಕೊರೊನಾದಿಂದ 650 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 24,843 ಜನರು ಚೇತರಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ 3,786 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 2,608 ಸೋಂಕಿತರು ಹೋಂ ಐಸೋಲೇಷನಲ್ಲಿ ಹಾಗು 1,178 ಸೋಂಕಿತರು ಕೋವಿಡ್ ಕೇರ್ ಸೆಂಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಕೇರಳದಿಂದ ರೆಮ್ಡಿಸಿವಿರ್‌ ಖರೀದಿಸಿ ಬೆಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ABOUT THE AUTHOR

...view details