ಕೊಪ್ಪಳ:ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರು ಗ್ರಾಮದ ಇಬ್ಬರು ಕೊರೊನಾ ಸೋಂಕಿತರು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಹೋಗಿರುವ ಅಂಶ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಬ್ಬರು ಸಂಚರಿಸಿದ ಮಾಹಿತಿ.. - ಕೊಪ್ಪಳದಲ್ಲಿ ಕೊರೊನಾ ಆತಂಕ
ಇದು ಸಿಡಿಆರ್ ಹಾಗೂ ಟ್ರಾವೆಲ್ ಹಿಸ್ಟರಿಯಿಂದ ತಿಳಿದು ಬಂದಿದೆ ಎಂದು ಬಾಗಲಕೋಟೆ ಪೊಲೀಸರು ಕೊಪ್ಪಳ ಜಿಲ್ಲಾ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಕೊಪ್ಪಳ ಜಿಲ್ಲಾ ಪೊಲೀಸ್ ಇಲಾಖೆಗೆ ಬರೆದಿರುವ ಪತ್ರದಲ್ಲಿ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಬಾಗಲಕೋಟೆ ಜಿಲ್ಲೆಯ ಢಾಣಕ ಶಿರೂರ್ ಗ್ರಾಮದ ಇಬ್ಬರು ಸೋಂಕಿತರಾದ P-681 ಹಾಗೂ P-684 ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮಕ್ಕೆ ಭೇಟಿ ನೀಡಿದ್ದಾರೆ.
ಇದು ಸಿಡಿಆರ್ ಹಾಗೂ ಟ್ರಾವೆಲ್ ಹಿಸ್ಟರಿಯಿಂದ ತಿಳಿದು ಬಂದಿದೆ ಎಂದು ಬಾಗಲಕೋಟೆ ಪೊಲೀಸರು ಕೊಪ್ಪಳ ಜಿಲ್ಲಾ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ಕಲೆಹಾಕುತ್ತಿದೆ. ಈ ಇಬ್ಬರು ವ್ಯಕ್ತಿಗಳು ಜಿಲ್ಲೆಯ ಹನುಮನಾಳ ಗ್ರಾಮಕ್ಕೆ ಭೇಟಿ ನೀಡಿ ಹೋಗಿರುವುದು ಈಗ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.